ಶ್ರೀ ಭಕ್ತ ವತ್ಸಲ ಅಯ್ಯಪ್ಪ ಸೇವಾ ಸಮಿತಿ ಮುರತ್ತಂಗಡಿ, ಸಾಣೂರುರಿನಲ್ಲಿ 10-01-2025ನೇ ಶುಕ್ರವಾರ
13ನೇ ವರ್ಷದ ಮಹಾಪೂಜೆಯು ಶಿವಾನಂದ ಶಾಂತಿ ಮೂಡಬಿದ್ರೆ ಇವರ ನೇತೃತ್ವದಲ್ಲಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು : ಬೆಳಿಗ್ಗೆ ಗಂಟೆ 7-30 ರಿಂದ ಸ್ವಾಮಿಗಳು ಇರುಮುಡಿ ಕಟ್ಟುವುದು, ಬೆಳಿಗ್ಗೆ ಗಂಟೆ 10 ರಿಂದ ಭಜನಾ ಕಾರ್ಯಕ್ರಮ, ಮದ್ಯಾಹ್ನ ಗಂಟೆ 12 ರಿಂದ ಮಹಾಪೂಜೆ ನಡೆಯಲಿದೆ.
ಸಾಯಂಕಾಲ 7.00 ರಿಂದ ತುಳಸಿ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ಹಾಗೂ ಮಕ್ಕಳು ಇವರ ಸೇವಾರ್ಥವಾಗಿ ಪಂಚ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಸಾರಥ್ಯದ ಸದಾಶಿವ ಅಮಿನ್ ಇವರ ಪ್ರಧಾನ ಭಾಗವತಿಗೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಸೌಕೂರು ಇವರು “ಭಕ್ತ ವತ್ಸಲ” ಮನೆಯ ಮುಂಭಾಗದಲ್ಲಿ ಹಾಕಿರುವ ಭವ್ಯ ರಂಗ ಮಂಟಪದಲ್ಲಿ ಶ್ರೀ ಸೌಕೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಕಾಲಮಿತಿಯಾಗಿ ನಡೆಯಲಿದೆ.
ಸಾಯಂಕಾಲ 6-30ಕ್ಕೆ ಚೌಕಿ ಪೂಜೆ , ರಾತ್ರಿ 8 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.