Sunday, July 14, 2024
Homeಕಾರ್ಕಳಸಾಣೂರು ರಾಷ್ಟ್ರೀಯ ಹೆದ್ದಾರಿ 169 : ಚರಂಡಿ ವ್ಯವಸ್ಥೆ ಇಲ್ಲದ ರಸ್ತೆಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತಿದ್ದ...

ಸಾಣೂರು ರಾಷ್ಟ್ರೀಯ ಹೆದ್ದಾರಿ 169 : ಚರಂಡಿ ವ್ಯವಸ್ಥೆ ಇಲ್ಲದ ರಸ್ತೆಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತಿದ್ದ ದುರವಸ್ಥೆಗೆ ಕೊನೆಗೂ ಸಿಕ್ಕಿತು ಮುಕ್ತಿ

ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ರವರು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ತೋರಿಸುವ ಉತ್ಸಾಹ ಮತ್ತು ಕಾಳಜಿಯನ್ನು ಮಳೆಗಾಲದಲ್ಲಿ ಸುರಿಯುವ ಮಳೆ ನೀರು ಸೂಕ್ತವಾದ ಚರಂಡಿ ವ್ಯವಸ್ಥೆಯೊಂದಿಗೆ ಸರಾಗವಾಗಿ ಹರಿದು ಹೋಗುವಂತೆ ಮಾಡುವ ಯಾವುದೇ ಕಾಮಗಾರಿಗಳನ್ನು ಮಾಡದಿರುವ ಕಾರಣ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಇಂದಿರಾ ನಗರ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು ಚರಂಡಿಯ ನೀರು ಕಳೆದ ಒಂದು ತಿಂಗಳಿನಿಂದ ರಸ್ತೆ ಮೇಲೆಯೇ ಹರಿದು ಕೃತಕ ನೆರೆ ನಿರ್ಮಾಣಗೊಳ್ಳುತ್ತಿತ್ತು.

ಇಂದಿರಾನಗರ ಕಾಲೋನಿಯಲ್ಲಿ ನೂರಕ್ಕಿಂತಲೂ ಹೆಚ್ಚು ಮನೆಗಳಿದ್ದು, ಪ್ರತಿನಿತ್ಯ ಸಂಚರಿಸುವ ದ್ವಿಚಕ್ರ ವಾಹನ, ರಿಕ್ಷಾ, ಇನ್ನಿತರ ವಾಹನಗಳ ಚಾಲಕರು ಬಹಳ ಅಪಾಯಕಾರಿ ಸ್ಥಿತಿಯಲ್ಲಿ ಕೃತಕ ನೆರೆಯ ಪ್ರದೇಶದಲ್ಲಿ ವಾಹನಗಳನ್ನು ಚಲಾಯಿಸಬೇಕಾಗಿತ್ತು.

  • ವಿದ್ಯಾರ್ಥಿಗಳು ,ಮಹಿಳೆಯರು, ವೃದ್ಧರು ಬಹಳ ಕಷ್ಟಪಟ್ಟು ತಮ್ಮ ಬಟ್ಟೆಯನ್ನು ತೋಯಿಸಿಕೊಂಡು ಕೃತಕ ನೆರೆ ಪ್ರದೇಶದಲ್ಲಿ ಕಾಲು ಹಾಕುತ್ತಾ ಸಾಗುತ್ತಿದ್ದು ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದರು.
  • ಕಳೆದ ಆದಿತ್ಯವಾರ ಜೂನ್ 30ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ರವರು ಈ ಪ್ರದೇಶಕ್ಕೆ ಭೇಟಿ ನೀಡಿ ಗುತ್ತಿಗೆದಾರ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರಿಗೆ ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡುವಂತೆ ನಿರ್ದೇಶಿಸಿದ್ದರೂ, ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿರಲಿಲ್ಲ.
  • ಜೂನ್ 4, ಗುರುವಾರದಂದು ಬೆಳಿಗ್ಗೆ 10:30 ಗಂಟೆಗೆ ಸುರಿದ ಭಾರಿ ಮಳೆಗೆ ಇಂದಿರಾನಗರ ಹೋಗುವ ಅಡ್ಡರಸ್ತೆಯ ಆರಂಭದ ಭಾಗದಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಹೋಗಿ ಕೆರೆಯಂತಾಗಿ, ರಸ್ತೆಯ ಮೇಲೆ ಚಲಿಸುವವರು ಕೃತಕ ನೆರೆಯಲ್ಲಿ ಅಪಾಯಕಾರಿಯಾಗಿ ನಡೆದಾಡಬೇಕಿತ್ತು ಹಾಗೂ ದ್ವಿಚಕ್ರವಾಹನಗಳು ಬಹಳ ಸಾಹಸ ಪಟ್ಟು ಅಪಾಯಕಾರಿ ಸ್ಥಿತಿಯಿಂದ ರಸ್ತೆ ದಾಟುತ್ತಿದ್ದರು.

ಈ ಸಂದರ್ಭದಲ್ಲಿ ಪಂಚಾಯತ್ ಆಡಳಿತದ ತಂಡ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡುತ್ತಿತ್ತು.

ಸ್ಥಳೀಯ ಜನತೆ ಈ ದುರವಸ್ತೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯವೈಖಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಮಧ್ಯಾಹ್ನ 3:30 ಗಂಟೆಗೆ ದಿಲೀಪ್ ಬಿಲ್ಡ್ ಕಾರ್ನ್ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರು ತಮ್ಮ ತಂಡದೊಂದಿಗೆ ಆಗಮಿಸಿ ಇಂದಿರಾನಗರ ಅಡ್ಡರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮೋರಿಯನ್ನು ಹಾಕಿ ರಾಷ್ಟ್ರೀಯ ಹೆದ್ದಾರಿಯ ಮಟ್ಟಕ್ಕೆ ಕೆಳಮಟ್ಟದಲ್ಲಿದ್ದ ಇಂದಿರಾನಗರ ಅಡ್ಡರಸ್ತೆಯನ್ನು ಜಲ್ಲಿ ಸಿಮೆಂಟ್ ನಿಂದ ಏರಿಸಿ, ನೀರು ನಿಲ್ಲದಂತೆ ಸುವ್ಯವಸ್ಥಿತಗೊಳಿಸಿ ,ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ಜನರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜನ ಜಾಗೃತಿಯಿಂದ ಮಾತ್ರ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಸಂಸ್ಥೆ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ಚುರುಕು ಮುಟ್ಟಿಸಬಹುದು ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮಕ್ಕೆ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular