Thursday, April 24, 2025
Homeಕಾರ್ಕಳಸಾಣೂರು ರಾ.ಹೆ. 169_ ಕುಡಿಯುವ ನೀರು ಪೈಪ್ಲೈನ್ ಅವ್ಯವಸ್ಥೆ _ ನೀರು ಸರಬರಾಜಿಗೆ ತೊಂದರೆ!?

ಸಾಣೂರು ರಾ.ಹೆ. 169_ ಕುಡಿಯುವ ನೀರು ಪೈಪ್ಲೈನ್ ಅವ್ಯವಸ್ಥೆ _ ನೀರು ಸರಬರಾಜಿಗೆ ತೊಂದರೆ!?

ಸಾಣೂರು ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮುರತಂಗಡಿ ಸಾಣೂರು ಪದವಿಪೂರ್ವ ಕಾಲೇಜು ವರೆಗೆ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯವರು ಅಂತಿಮಹಂದದ ಸರ್ವಿಸ್ ರಸ್ತೆ, ಬೀದಿ ದೀಪ, ಸೇತುವೆ ಹಾಗೂ ಅದರ ಸಂಪರ್ಕ ರಸ್ತೆಯ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮಾಡುತ್ತಿದ್ದಾರೆ.

ಜೆಸಿಬಿ ಕೆಲಸ ಕಾರ್ಯಗಳನ್ನು ನಡೆಸುವಾಗ ಕುಡಿಯುವ ನೀರಿನ ಪೈಪ್ ಲೈನ್ ಆಗಾಗ ಹಾನಿಗೊಳಗಾಗುತ್ತಿದ್ದು, ಇತ್ತೀಚೆಗೆ ಮುರತಂಗಡಿ ಪರಿಸದ ಸುಮಾರು 50 ಮನೆಗಳಿಗೆ ಸುಮಾರು 15 ದಿನ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗದೆ ಬಹಳಷ್ಟು ತೊಂದರೆ ಕೊಟ್ಟಿದ್ದರು. ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ಜನತೆ ಪ್ರತಿಭಟನೆಗೆ ಸಿದ್ದರಾಗುವಾಗ ಎಚ್ಚೆತ್ತು ಕೊನೆಗೂ ಪೈಪ್ ಲೈನ್ ದುರಸ್ತಿ ಕಾರ್ಯವನ್ನು ಮಾಡಿರುತ್ತಾರೆ.

ಪೈಪ್ ಲೈನ್ ಮೇಲೆ ಮಣ್ಣು ಮುಚ್ಚಿಲ್ಲ!?!?

ಮುರತಂಗಡಿ ಡಾಬಾದಿಂದ ಶ್ರೀ ದಯಾನಂದ ಜೈ ಮನೆಯವರೆಗೆ ಸುಮಾರು 100 ಮೀಟರ್ ಕುಡಿಯುವ ನೀರಿನ ಪೈಪ್ ಲೈನ್ ಭೂಮಿಯ ಮೇಲೆಯೇ ಇದ್ದು, ನಡೆದಾಡುವವರಿಗೆ ಹಾಗೂ ಹಾದು ಹೋಗುವ ಪಶುಗಳ ಕಾಲಿಗೆ ಸಿಕ್ಕಿ ತೊಂದರೆಯನ್ನು ನೀಡುತ್ತಿದೆ. ಈ ಬಗ್ಗೆ ಪಂಪು ಚಾಲಕರಾದ ಶ್ರೀ ಜಯಂತ ರವರು ಗುತ್ತಿಗೆದಾರ ಕಂಪನಿಯ ಪ್ರಮುಖರ ಗಮನಕ್ಕೆ ತಂದರು ಜೆಸಿಪಿಯಿಂದ ಮಣ್ಣು ಹಾಕುವ ಕೆಲಸ ಮಾಡದೆ ನಿರ್ಲಕ್ಷ ತೋರುತ್ತಿದ್ದಾರೆ.

ಪೈಪ್ಲೈನ್ ಹಾನಿ: ಕುಡಿಯುವ ನೀರು ವ್ಯತ್ಯಯ

ಜೆಸಿಬಿಯಿಂದ ಮಣ್ಣಿನ ಕೆಲಸ ಮಾಡುವಾಗ ಮುರತಂಗಡಿ ಶೀನ ಮೂಲ್ಯರ ಮನೆಯ ಎದುರು ಮೋರಿಯಡಿಯಲ್ಲಿ ಪೈಪ್ ಲೈನ್ ಒಡೆದಿದ್ದು, ಹತ್ತಿರದ ಐದಾರು ಮನೆಗಳಿಗೆ ಕಳೆದ ಒಂದು ವಾರದಿಂದ ಕುಡಿಯುವ ನೀರು ಪೂರೈಕೆ ಆಗದೆ ತುಂಬಾ ತೊಂದರೆ ಪಡುತ್ತಿದ್ದಾರೆ.

ಸಾಣೂರು ಮರತಂಗಡಿ ಎಕ್ಸ್ಪ್ರೆಸ್ ಪೈಪ್ಲೈನ್ ಗೆ ಹಾನಿ!?!?

ಸಾಣೂರು ಮಸೀದಿ ಬಳಿಯ ಬೋರ್ವೆಲ್ನಿಂದ ಮುರತಂಗಡಿ ಇರುವತ್ತೂರು ರಸ್ತೆಯಲ್ಲಿರುವ ಓವರ್ ಹೆಡ್ ಟ್ಯಾಂಕಿಗೆ ನೀರು ಸರಬರಾಜಾಗುತ್ತಿರುವ ಪೈಪ್ ಲೈನ್ ಎರಡು-ಮೂರು ಕಡೆಗಳಲ್ಲಿ ಹಾನಿಯಾಗಿದ್ದು, ಟ್ಯಾಂಕಿಗೆ ಕುಡಿಯುವ ನೀರು ಪೂರೈಕೆಯಾಗದೆ ಮರತಂಗಡಿ ಪರಿಸರದ ಮನೆಗಳಿಗೆ ಕುಡಿಯುವ ನೀರು ಸರಬರಾಜಿಗೆ ತುಂಬಾ ತೊಂದರೆಯಾಗುತ್ತಿದೆ.

ಹೆದ್ದಾರಿ ಕಾಮಗಾರಿಗಳಿಂದಾಗಿ ನಿರಂತರವಾಗಿ ಕುಡಿಯ ನೀರಿನ ಪೈಪ್ ಗೆ ಆಗುತ್ತಿರುವ ಹಾನಿಯ ಬಗ್ಗೆ ಪಂಪು ಚಾಲಕರು ನಿರಂತರವಾಗಿ ಗಮನಕ್ಕೆ ತಂದರೂ, ಅಸಡ್ಡೆಯಿಂದ ದುರಸ್ತಿ ಕಾರ್ಯ ಮಾಡದೆ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.

ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ರವರು ಈ ಬಗ್ಗೆ ಕಂಪೆನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರ ಗಮನಕ್ಕೆ ತಂದರೂ ಕೂಡಲೇ ಸರಿ ಮಾಡುತ್ತೇವೆ ಎಂದು ಬಾಯುಪಚಾರದ ಮಾತು ಹೇಳುತ್ತಾರೆ ವಿನಹ ಯಾವುದೇ ದುರಸ್ತಿ ಕಾರ್ಯ ಮಾಡಿಲ್ಲ.

ಅಡ್ಡರಸ್ತೆಗಳಿಗೆ ಡಾಮರೀಕರಣ ಇಲ್ಲ!?!?
… ಕೆಡವಿರುವ ಬಸ್ಸು ತಂಬುದಾಣಗಳಿಗೆ ಪುನರ್ ನಿರ್ಮಾಣಕ್ಕೆ ಇನ್ನೂ ಜಾಗ ಗುರುತಿಸಿಲ್ಲ!?!?.

ಕಳೆದೆರಡು ವರ್ಷಗಳಿಂದ ಪ್ರಖರ ಬಿಸಿಲಿಗೆ ಹಾಗೂ ಮಳೆಗಾಲದಲ್ಲಿ ಗಾಳಿ _ಮಳೆಗೆ ಪ್ರಯಾಣಿಕರು, ವಿದ್ಯಾರ್ಥಿಗಳು, ಅಧ್ಯಾಪಕರು, ರಸ್ತೆಮಧ್ಯದಲ್ಲಿಯೇ ಅಪಾಯಕಾರಿ ಸ್ಥಿತಿಯಲ್ಲಿ ಬಸ್ಸಿಗೆ ಕಾಯುತ್ತಾ ಅನುದಿನ ಹೇಳಲಾರದ ಸಂಕಟಪಡುತ್ತಿದ್ದಾರೆ.

ಹೆದ್ದಾರಿ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿರುವ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾಣೂರಿನ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದೀಗ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸಾಲೂರು ಗ್ರಾಮದ ಎಲ್ಲಾ ಸ್ವಯಂಸೇವಾ ಸಂಸ್ಥೆಗಳು ಮತ್ತು ಗ್ರಾಮಸ್ಥರು ಸೇರಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮಗಳಿಗೆ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular