ಮಾ.3 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ ದತ್ತಿಪ್ರಶಸ್ತಿ ಸಮಾರಂಭದಲ್ಲಿ ಶಾರದಾ ಎ .ಅಂಚನ್ ಕೊಡವೂರು ಇವರ ವೈದ್ಯಕೀಯ ಕೃತಿ ” ರಕ್ತಶುದ್ಧಿ-ಆರೋಗ್ಯವೃದ್ಧಿ” ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ, ಶ್ರೀ ಮಾನ್ಯ ಕರ್ನಾಟಕ ಲೋಕಾಯುಕ್ತರಾದ ಬಿ.ಎಸ್.ಪಾಟೀಲ್ , ಚಲನಚಿತ್ರ ಸಾಹಿತಿ ಕವಿರತ್ನ ಡಾ.ನಾಗೇಂದ್ರ ಪ್ರಸಾದ್, ಸಾಹಿತಿ ಹಾಗೂ ವೈದ್ಯರಾದ ಡಾ.ಯೋಗಣ್ಣ,ನಿವೃತ್ತ ಉಪಕುಲಪತಿಗಳಾದ ಡಾ. ಎನ್.ಎಸ್ ರಾಮೇಗೌಡ, ಕುಲಾಧಿಪತಿಗಳು ಹಾಗೂ ಮಾಲ್ಡೀವ್ಸ್ ದೇಶದ ಕೌನ್ಸಿಲ್ ಜನರಲ್ ಗಳಾದ ಡಾ.ವಿ.ಜಿ .ಜೋಸೆಫ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಿದರು.