1989ರ ಮೇ ತಿಂಗಳಿನಿಂದ ನಿರಂತರ ಹಾಗೂ ನಿಯಮಿತವಾಗಿ ಪ್ರಕಟಗೊಳ್ಳುತ್ತಿರುವ `ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು ತನ್ನ35 ವರ್ಷಗಳ ಪ್ರಕಟಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪತ್ರಿಕೆಯು 2022ನೇ ಸಾಲಿನಿಂದ ಸಾಧನೆಗೈದೂ ಪ್ರಶಸ್ತಿ-ಪುರಸ್ಕಾರಗಳಿಂದ ವಂಚಿತರಾದ ಕೊಂಕಣಿಯ ವಯೋವೃದ್ಧ ಸಾಧಕರಿಗೆ `ಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಪುರಸ್ಕಾರದೊಂದಿಗೆ ಸ್ಮರಣಿಕೆ, ಸನ್ಮಾನಪತ್ರ, ರೂ. 5000-ಗಳ ನಗದನ್ನು ಸಹ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವುದು.
2024ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಕಳೆದ 40ರಿಂದ 50ವರ್ಷಗಳಷ್ಟು ಸುದೀರ್ಘ ಕಾಲ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗೆ ಅಪಾರ ಸೇವೆ ಸಲ್ಲಿಸಿದ ಕುಂದಾಪುರದ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ ಅವರನ್ನು ಆಯ್ಕೆಮಾಡಲಾಗಿದೆ.