Thursday, April 24, 2025
Homeತುಳು ಭಾಷೆಧರ್ಮ ಚಾವಡಿ"ತುಳು ಚಿತ್ರದ ಪೋಸ್ಟರ್ ಬಿಡುಗಡೆ ಗೊಳಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು :ಜುಲೈ 25ರಂದು ತೆರೆಗೆ

ಧರ್ಮ ಚಾವಡಿ”ತುಳು ಚಿತ್ರದ ಪೋಸ್ಟರ್ ಬಿಡುಗಡೆ ಗೊಳಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು :ಜುಲೈ 25ರಂದು ತೆರೆಗೆ


ಧರ್ಮ ಚಾವಡಿ”ತುಳು ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಇದೀಗ ಚಿತ್ರತಂಡ ಬಿಡುಗಡೆ ತಿಂಗಳನ್ನು ಘೋಷಿಸಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರು, ಶಶಿಕುಮಾರ್ ರೈ ಬಾಲ್ಯೋಟ್ಟು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಗೊಳಿಸಿ ,ಚಿತ್ರ ತೆರೆಗೆಬರುವ ತಿಂಗಳನ್ನು ಘೋಷಿಸಿದ್ದಾರೆ.ಧರ್ಮ ದೈವ ಚಿತ್ರ ದೇಶ ವಿದೇಶಗಲ್ಲಿ ಮೆಚ್ಚುಗೆ ಪಡೆದಿದ್ದು ,ಧರ್ಮ ಚಾವಡಿ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲಿ.. ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರವೀಣ್ ರೈ ಪಂಜೊಟ್ಟು, ನಿರ್ಮಾಪಕರು,ಜಗದೀಶ್ ಅಮೀನ್ ನಡುಬೈಲು,ನಾರಾಯಣ ರೈ ಕುಕ್ಕುವಳ್ಳಿ, ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ರಮೇಶ್ ರೈ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಕಾರ್ಯಕ್ರಮವನ್ನು ನಟ ಶರತ್ ಆಳ್ವ ನೆರವೇರಿಸಿದರು. ಚಿತ್ರಕಥೆ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.ಚಿತ್ರ ತಂಡದ ಬಹುತೇಕ ಸದಸ್ಯರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular