ಮುಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ಗೌರವಾನ್ವಿತ ಅರಸರಾದ ಶ್ರೀ ದುಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಮುಲ್ಕಿ ಅರಮನೆ ವೆಲ್ ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರ ಪಂಚಾಯತ್ ಮುಲ್ಕಿ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಅಂಚನ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ್ ಆಳ್ವ, ಪ್ರಿಯದರ್ಶಿನಿ ಕೋ ಆಪರೇಟ್ ಬ್ಯಾಂಕ್ ನ ಅಧ್ಯಕ್ಷರಾದ ವಸಂತ್ ಬೆರ್ನಾಡ್, ಜಾನಪದ ವಿದ್ವಾಂಸರಾದ ಶ್ರೀ ಗಣೇಶ್ ಅಮೀನ್ ಸಂಕಮಾರ್, ಅರಮನೆ ವೆಲ್ಫೇರ್ ಟ್ರಸ್ಟ್ ನ ಮುಖ್ಯಸ್ಥರಾದ ಗೌತಮ್ ಜೈನ್, ಚಂದ್ರಶೇಖರ್ ಕಾಸಪ್ಪಯ್ಯನವರ ಮನೆ, ವಿನೋದ್ ಎಸ್ ಸಾಲ್ಯಾನ್, ಮಹಿಮ್ ಹೆಗ್ಡೆ, ಸತೀಶ್ ಶೆಟ್ಟಿ, ಹರ್ಷಿತ್ ಸಾಲಿಯಾನ್ , ಸತೀಶ್ ಭಟ್ ಉಪಸ್ಥಿತರಿದ್ದರು. ಡಿಸೆಂಬರ್ ತಿಂಗಳಲ್ಲಿ ನಡೆಯುವ ಅರಸು ಕಂಬಳದ ಪೂರ್ವಭಾವಿಯಾಗಿ ನಡೆಯುವ ವಿವಿಧ ಜಾನಪದ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಚರ್ಚಿಸಲಾಯಿತು.