Tuesday, April 22, 2025
Homeಉಡುಪಿಪರ್ಕಳ ಶೆಣೈ ಕುಟುಂಬದ ಹಿರಿಯ ಸದಸ್ಯೆ ಸತ್ಯವತಿ ಶೆಣೈ ನಿಧನ

ಪರ್ಕಳ ಶೆಣೈ ಕುಟುಂಬದ ಹಿರಿಯ ಸದಸ್ಯೆ ಸತ್ಯವತಿ ಶೆಣೈ ನಿಧನ

ಉಡುಪಿ: ಪರ್ಕಳ ಶೆಣೈ ಕುಟುಂಬದ ದಿ. ಡಾ.ಅನಂತ ಶೆಣೈ ಅವರ ಧರ್ಮಪತ್ನಿ ಸತ್ಯವತಿ ಶೆಣೈ ಯಾನೆ ನಾರಾಯಣಿ ಶರ್ಮಾ ( 84 ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಉಡುಪಿ ವಳಕಾಡಿನ ಸ್ವಗೃಹದಲ್ಲಿ  ನಿಧನರಾದರು . ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಮಣಿಪಾಲದ ಪ್ರಧಾನ ಕಾರ್ಯಾಲಯ ಹಾಗೂ  ಉಡುಪಿ ಕ್ಷೇತ್ರೀಯ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. ಧಾರ್ಮಿಕ, ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಅವರು ಈರ್ವರು ಪುತ್ರರಾದ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮತ್ತು ಉದ್ಯಮಿ‌ ಅಮೃತ್ ಶೆಣೈ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular