ಮಂಗಳೂರು : ಭಾರತಿ ಶಾಲೆಯಲ್ಲಿ ನಡೆದ ಪ್ರದೀಪ್ ಕುಮಾರ್ ರವರ ಸಾರಥ್ಯದ ಕಥಾಬಿಂದು ಪ್ರಕಾಶನ ಸಂಸ್ಥೆಯ ಕಥಾಬಿಂದು ಕೃತಿಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಕೊಡಮಾಡುವ ರಾಜ್ಯ ಪ್ರಶಸ್ತಿಗಳಲ್ಲಿ ಪುಷ್ಪ ಪ್ರಸಾದ್ ರವರ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಸೌರಭ ರತ್ನ ರಾಜ್ಯ ಪ್ರಶಸ್ತಿಯನ್ನು ಗೌರವಾನ್ವಿತ ಗಣ್ಯರಿಂದ ಪ್ರಧಾನ ಮಾಡಲಾಯಿತು. ಪುಷ್ಪ ಪ್ರಸಾದ್ ಇವರಿಂದ ಒಸಗೆಯ ಎಸಳು, ಭಾವ ನೈವೇದ್ಯ, ಹೆಜ್ಜೆ ತಾಳದ ಗೆಜ್ಜೆ ಘಲಿರು, ನಕ್ಷತ್ರ ಪುಂಜ, ಪುಟಾಣಿ ಸ್ವರ್ಗ ಕೃತಿಗಳು ಪ್ರಕಟಗೊಂಡಿದ್ದು, ಅನೇಕ ಬಹುಮಾನಗಳು ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿರುತ್ತಾರೆ.