ಮಂಗಳೂರು: ಟಾಟಾ ಡಿಜಿಟಲ್‍ನ ಟಾಟಾ ನ್ಯೂ ತನ್ನ ಸ್ಥಿರ ಠೇವಣಿ ಮಾರುಕಟ್ಟೆ ತಾಣ ಪ್ರಾರಂಭಿಸುವುದರೊಂದಿಗೆ ರಿಟೇಲ್ ಹೂಡಿಕೆಯ ಕ್ಷೇತ್ರ ಪ್ರವೇಶಿಸಿದೆ.
ಈ ವಿನೂತನ (ಈixeಜ ಆeಠಿosiಣs ಒಚಿಡಿಞeಣಠಿಟಚಿಛಿe) ವೇದಿಕೆಯು ಉಳಿತಾಯ ಬ್ಯಾಂಕ್ ಖಾತೆಯ ಅಗತ್ಯವಿಲ್ಲದೇ ಶೇ 9.1 ವರೆಗಿನ ಬಡ್ಡಿದರದಲ್ಲಿ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸಲಿದೆ.
ಹಣ ಹೂಡಿಕೆ ಮಾಡುವುದು ಈಗ ಹೆಚ್ಚು ಸುಲಭವಾಗಿದ್ದು, ಈ ಮೊದಲಿಗಿಂತ ಹೆಚ್ಚು ಸುಲಲಿತವಾಗಿ ಹೂಡಿಕೆ ಅವಕಾಶ ದೊರೆಯಲಿದೆ. ಟಾಟಾ ನ್ಯೂ ಗ್ರಾಹಕರು ಇನ್ನು ಮುಂದೆ ಪರಿಪೂರ್ಣವಾದ ಡಿಜಿಟಲ್ ಪ್ರಕ್ರಿಯೆಯಲ್ಲಿ ಕೇವಲ 10 ನಿಮಿಷಗಳಲ್ಲಿ ರೂ. 1000 ದಿಂದ ಠೇವಣಿ ಆರಂಭಿಸಿ ತಮ್ಮ ಹೂಡಿಕೆ ಪಯಣ ಆರಂಭಿಸಬಹುದು ಎಂದು ಎಂದು ಟಾಟಾ ಡಿಜಿಟಲ್‍ನ ಹಣಕಾಸು ಸೇವೆಗಳ ಮುಖ್ಯ ವಹಿವಾಟು ಅಧಿಕಾರಿ ಗೌರವ್ ಹರ್ಜತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸೌಲಭ್ಯವು- ಗ್ರಾಹಕರ ಆರಂಭಿಕ ಬಂಡವಾಳವನ್ನು ಲೆಕ್ಕಿಸದೇ ಪ್ರತಿಯೊಬ್ಬರಿಗೂ ಆರ್ಥಿಕ ಸಬಲೀಕರಣದ ಬಾಗಿಲು ತೆರೆಯಲಿದೆ. ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದಿಂದ (ಡಿಐಸಿಜಿಸಿ) ರೂ. 5 ಲಕ್ಷದವರೆಗಿನ ಬ್ಯಾಂಕ್ ಹೂಡಿಕೆಗೆ ವಿಮೆ ಖಾತರಿ ಇರುವುದರಿಂದ ಗ್ರಾಹಕರಿಗೆ ಸುರಕ್ಷತೆ ಮತ್ತು ಸಂಪೂರ್ಣ ಮನಶಾಂತಿ ದೊರೆಯಲಿದೆ ಎಂದು ವಿವರಿಸಿದ್ದಾರೆ.
ಸಂಪತ್ತನ್ನು ಆತ್ಮವಿಶ್ವಾಸದಿಂದ ಮತ್ತು ಸಲೀಸಾಗಿ ಬೆಳೆಸಲು ಅನುಭವಿ ಮತ್ತು ಹೊಸ ಹೂಡಿಕೆದಾರರನ್ನು ಈ ವಿನೂತನ ಉಪಕ್ರ ಸಶಕ್ತಗೊಳಿಸಲಿದೆ’ ಎಂದು ಹೇಳಿದ್ದಾರೆ.