ಕುಂದಾಪುರ : ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಆಶ್ರಯದಲ್ಲಿ ಬೈತುಲ್ ಮಾಲ್ ಹಂಗಾರಕಟ್ಟೆ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಅಭಿನಂದನಾ ಕಾರ್‍ಯಕ್ರಮ ಶನಿವಾರ ಶಾಸ್ತ್ರಿ ಸರ್ಕಲ್ ಬಳಿಯ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಕಚೇರಿಯಲ್ಲಿ ನಡೆಯಿತು.
ಕಾರ್ಕಳದ ಎನ್‌ಎಸ್ ಅಕಾಡೆಮಿಯ ನಾಲ್ವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 1 ಲಕ್ಷ ರೂ. ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು
ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ನಗರ ಪ್ರಾಧಿಕಾರದ ಸದಸ್ಯ ಅಲಾಜ್, ಗ್ಯಾರಂಟಿ ಸಮಿತಿ ಸದಸ್ಯ ಚಂದ್ರ ಅಮೀನ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್‌ನ ಕ್ರಿಕೆಟ್ ಆಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಎನ್‌ಎನ್‌ಒ ಕಮ್ಯೂನಿಟಿ ಕೇಂದ್ರವು ಸಮಾಜಮುಖಿ ಸೇವೆಯ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ ಇಲ್ಲದವರಿಗೆ ನೆರವು ನೀಡುವಂತಹ ಪುಣ್ಯದ ಕಾರ್‍ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಹುದೊಡ್ಡ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದವರು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮುಸ್ತಾಕ್ ಹೆನ್ನಾಬಲ್ ಸಮ್ಮಾನ ಸ್ವೀಕರಿಸಿ, ಎಲ್ಲ ಸಮುದಾಯಗಳು ಶಿಕ್ಷಣದೊಂದಿಗೆ ಸಾಹಿತ್ಯವನ್ನು ಆದ್ಯತೆಯ ನೆಲೆಯಾಗಿ ಪರಿಗಣಿಸಿದಾಗ ಇನ್ನಷ್ಟು ಬೆಳೆವಣಿಗೆ ಹೊಂದಲು ಸಾಧ್ಯ. ಶಿಕ್ಷಣದೊಂದಿಗೆ ಸಾಹಿತ್ಯಕ್ಕೂ ಹೆಚ್ಚಿನ ಮಹತ್ವವನ್ನು ನೀಡುವ ಅನಿವಾರ್ಯತೆಯಿದೆ. ಆಗ ಮಾತ್ರ ಎಲ್ಲರೊಂದಿಗೂ ಸೌಹಾರ್ದತೆಯಿಂದ ಬಾಳಲು ಸಾಧ್ಯ. ಹಿಂದೂ ಸಮುದಾಯ ಒಳ್ಳೆಯ ಸಮುದಾಯವಾಗಲು ಇದುವೇ ಮುಖ್ಯ ಕಾರಣ ಎಂದವರು ತಿಳಿಸಿದರು.
ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ಕಾರ್ಯಕ್ರಮದ ಬಗ್ಗೆ ವಿವರಿಸಿದರೆ.
ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಯಾರೆಲ್ಲ ಯುವಕರು ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಿಸುವಂತ ಕಾರ್ಯ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆ ಉದ್ಘಾಟನೆ ಆದ ಬಳಿಕ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ. ಸರ್ಕಾರ, ನಮ್ಮ ಸಂಸ್ಥೆ, ದಾನಿಗಳ ಸಹಕಾರದೊಂದಿಗೆ ವಿದ್ಯಾಭ್ಯಾಸಕ್ಕೆ, ಬಡವರಿಗೆ ಸಹಾಯ ನೀಡುತ್ತಿದ್ದೇವೆ.
ಈ ಸಂದರ್ಭದಲ್ಲಿ, ಎನ್
ಎನ್.ಒ ಕೇಂದ್ರ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಲೀಮ್, ಪ್ರ. ಕಾರ್‍ಯದರ್ಶಿ ಝಮೀರ್ ಅಹ್ಮದ್ ರಷಾದಿ, ಕೋಶಅಧಿಕಾರಿ ಪೀರು ಸಾಹೇಬ್, ಕುವೈತ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಮನ್ಸೂರ್ ಇಬ್ರಾಹಿಂ,ಅಬ್ದುಲ್ ಖಾದರ್ಎನ್ ಎನ್ ಒ ಹೆಬ್ರಿ ಘಟಕದ ಅಧ್ಯಕ್ಷ ರಾದ ಮೊಹಮ್ಮದ್ ರಫೀಕ್ ಅಜೆಕಾರ್,ಎನ್ ಎನ್ ಒ ಟ್ರಸ್ಟ್ ನ ಸದ್ಯಸ್ಯರಾದ ಫಾಜ್ಲು ರಹಿಮಾನ್
ಮತ್ತಿತರರು ಉಪಸ್ಥಿತರಿದ್ದರು