ಉಡುಪಿ: ಕೌಂಡಿಣ್ಯ ಗೋತ್ರ ನಾಯಕ್ ಕುಲಪುರಷ ಕಮಿಟಿ (ರಿ) ಶ್ರೀ ರಾಮನಾಥ ದೇವಸ್ಥಾನ ಗೋವಾ ಇದರ ಉಡುಪಿ ಶಾಖೆ ಮತ್ತು ಉಡುಪಿ ಕಲ್ಪನಾ ಟಾಕೀಸ್ ಬಳಿಯ ಕಂಫರ್ಟ್ ಟವರ್ 4ನೇ ವರ್ಷದ ದಿ. ಜಯರಾಮ್ ನಾಯಕ್ ಮೆಮೋರಿಯಲ್ ವತಿಯಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ಪ್ರತಿಭಾಂತ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.
ಈ ಬಾರಿಯ ದ್ವಿತೀಯ, ಪಿಯುಸಿಯಲ್ಲಿ ಸಾಧನೆಗೈದ ಕೇದಾರ್ ನಾಯಕ್ ಒಳಕಾಡು, ಅಕ್ಷತಾ ನಾಯಕ್ ಉಡುಪಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ರಚನಾ ನಾಯಕ್ ಬೈಲೂರು ಚೇತನಾ ನಾಯಕ್ ಉಡುಪಿ, ಪ್ರಥ್ವಿ ನಾಯಕ್ ಇವರಿಗೆ 5 ಸಾವಿರ ರೂ ನಗದು ಹಾಗೂ ಪ್ರತಿಭಾ ಪುರಸ್ಕಾರ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ರಾಮ್ ಮೋಹನ್ ನಾಯಕ್, ಉಪಾಧ್ಯಕ್ಷ ಪ್ರೇಮಾನಂದ ನಾಯಕ್, ಕಾರ್ಯದರ್ಶಿ ಉಮೇಶ್ ನಾಯಕ್, ಕಂಚಾಚಿ ರಾಜಾರಾಂ ನಾಯಕ್, ರಾಧಾಕೃಷ್ಣ ನಾಯಕ್, ಕೃಷ್ಣಾನಂದ ನಾಯಕ್, ಶ್ರೀಧರ್ ನಾಯಕ್, ಶ್ರೀಪತಿ ನಾಯಕ್, ಚಂದ್ರಕಾಂತ್ ನಾಯಕ್ ಉಪಸ್ಥರಿದ್ದರು.