Thursday, July 25, 2024
HomeUncategorizedಜೈಂಟ್ಸ್ ಉಡುಪಿಯಿಂದ ಸ್ಕೂಲ್ ಬ್ಯಾಗ್ ವಿತರಣೆ

ಜೈಂಟ್ಸ್ ಉಡುಪಿಯಿಂದ ಸ್ಕೂಲ್ ಬ್ಯಾಗ್ ವಿತರಣೆ

ಜೈಂಟ್ಸ್ ಗ್ರೂಪ್ ಉಡುಪಿ ವತಿಯಿಂದ ಇಂದು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ಗಾಂಧಿ ಹಿರಿಯ ಪ್ರಾಥಮಿಕ ಶಾಲೆ (ಮುಖ್ಯ ಶಾಲೆ) ಉಡುಪಿಯಲ್ಲಿ ವಿತರಿಸಲಾಯಿತು. ಮುಂಬೈನ ಜೈಂಟ್ಸ್ ವೆಲ್ಫೇರ್ ಫೌಂಡೇಶನ್‌ನ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್, ಜೈಂಟ್ಸ್ ಉಡುಪಿ ಅಧ್ಯಕ್ಷ ಯಶವಂತ್ ಸಾಲಿಯಾನ್, ಆಡಳಿತ ನಿರ್ದೇಶಕ ವಾದಿರಾಜ್ ಸಾಲಿಯಾನ್, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ,ಮಾಜಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಕಾರ್ಯಕ್ರಮ ಸಂಯೋಜಕ ಜಗದೀಶ್ ಅಮೀನ್, ನಿರ್ದೇಶಕರಾದ ರಾಜೇಶ್ ಶೆಟ್ಟಿ, ರೇಖಾ ಪೈ, ವಿನಯ್ ಪೂಜಾರಿ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಎಲ್ಲಾ ಶಾಲಾ ಬ್ಯಾಗ್‌ಗಳನ್ನು ದುಬೈನ ಉದ್ಯಮಿ ಶೈನ್ ಪರೇರಾ ಬೊಲ್ಜಿ ಪ್ರಾಯೋಜಿಸಿದ್ದಾರೆ. ಮಹಿಳಾ ಶಿಕ್ಷಕಿ ಅಮಿತಾ ಸ್ವಾಗತಿಸಿ, ಜಯಶ್ರೀ ವಂದಿಸಿದರು.

RELATED ARTICLES
- Advertisment -
Google search engine

Most Popular