Friday, May 23, 2025
Homeಮಂಗಳೂರುಹರೇಕಳ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಹರೇಕಳ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಉಳ್ಳಾಲ: ಶಾಲೆಯ ಆವರಣ ಗೋಡೆ ಕುಸಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹರೇಕಳ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ. ನ್ಯೂಪಡ್ಪು ನಿವಾಸಿ ಸಿದ್ದೀಕ್ ಜಮೀಲಾ ದಂಪತಿಯ ಪುತ್ರಿ ಏಳು ವರ್ಷದ ಶಾಜಿಯಾ ಸಾವಿಗೀಡಾದ ವಿದ್ಯಾರ್ಥಿನಿ.

ಹರೇಕಲ ಹಾಜಬ್ಬ ಪ್ರಯತ್ನದಿಂದ ಆರಂಭವಾದ ಶಾಲೆ ಇದು. ಮುಡಿಪು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರ ಈ ಶಾಲೆಯಲ್ಲಿ ನಡೆಯುತ್ತಿತ್ತು.

ಇದೇ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಶಾಲೆಯ ಗೇಟಿನಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಶಾಲೆಯ ಗೋಡೆಯ ಆವರಣ ಬಾಲಕಿಯ ಮೇಲೆ ಕುಸಿದು ಬಿದ್ದಿತು ಎನ್ನಲಾಗಿದೆ. ಮಳೆಯಿಂದಾಗಿ ಆವರಣಗೋಡೆ ಒದ್ದೆಯಾಗಿತ್ತು ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular