Thursday, December 5, 2024
HomeUncategorizedಶಾಲೆಯಿಂದ ಮನೆಗೊಂದು ಪತ್ರಿಕೆ ' ಅಮೃತವಾಣಿ ' ಅನಾವರಣ ಸಮಾರಂಭ

ಶಾಲೆಯಿಂದ ಮನೆಗೊಂದು ಪತ್ರಿಕೆ ‘ ಅಮೃತವಾಣಿ ‘ ಅನಾವರಣ ಸಮಾರಂಭ

ಪತ್ರಿಕೆ ವಿದ್ಯಾರ್ಥಿಗಳ ಓದುವಿಕೆ ಮತ್ತು ಬರೆಯುವಿಕೆಯ ಹವ್ಯಾಸವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಥೆ ಕವನ ಬರೆಯುವಂತ ಹವ್ಯಾಸಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಮೃತ ಭಾರತಿ ಸಂಸ್ಥೆಯು ಅಮೃತವಾಣಿ ಶಾಲೆಯಿಂದ ಮನೆಗೊಂದು ಪತ್ರಿಕೆ12 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ . ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅನಾವರಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಶ್ರೀ ವಿಜಯಕುಮಾರ್ ಶೆಟ್ಟಿ ಮಾತನಾಡಿದರು.

ಅಮೃತ ಭಾರತಿ ಸಭಾಂಗಣದಲ್ಲಿ ಜುಲೈ ಮತ್ತು ಆಗಸ್ಟ್ ಮಾಸದ ಅಮೃತವಾಣಿ ಪತ್ರಿಕೆ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

ಅಮೃತ ಭಾರತಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ವಿಜಯಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಜುಲೈ ಮಾಸದ ಪತ್ರಿಕೆ ಪ್ರಾಯೋಜಕರು ಶ್ರೀಯುತ ರಾಘವೇಂದ್ರ ಭಟ್ ಮುದ್ರಾಡಿ.ಆಗಸ್ಟ್ ಮಾಸದ ಪತ್ರಿಕೆ ಪ್ರಾಯೋಜಕರು ಶ್ರೀ ನಾಗರಾಜ ಮಕ್ಕಿತ್ತಾಯ ನೀಲಾವರ . ವಿದ್ಯಾರ್ಥಿಗಳಾದ ಮತ್ತು ಸಜನಿ ಭಟ್ , ವಾದಿರಾಜ ಮಕ್ಕಿತ್ತಾಯ ಉಪಸ್ಥಿತರಿದ್ದು ಪತ್ರಿಕೆಯನ್ನು ಅನಾವರಣಗೊಳಿಸಿದರು . ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣಆಚಾರ್ ಉಪಸ್ಥಿತರಿದ್ದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಆಂಗ್ಲ ಮಾಧ್ಯಮ ಹೈಸ್ಕೂಲ್ ವಿಭಾಗದಲ್ಲಿ 12 ವರ್ಷಗಳಿಂದ ಪ್ರತಿ ಶೈಕ್ಷಣಿಕ ವರ್ಷದ ಪ್ರತಿ ತಿಂಗಳು ಬಿಡುಗಡೆಗೊಳ್ಳುತ್ತಿರುವ ಪತ್ರಿಕೆ ಅಮೃತವಾಣಿ.ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾಗಿ ಶ್ರೀ ಮಹೇಶ ಹೈಕಾಡಿ ಪತ್ರಿಕೆಯ ಪ್ರಕಟಣೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ಶೈಕ್ಷಣಿಕ ವರ್ಷದ ಜೂನ್ ಮಾಸದ ಪತ್ರಿಕೆ ಬಿಡುಗಡೆಗೊಂಡಿದ್ದು ಶ್ರೀ ರವಿರಾಜ್ ಮಂಜ ಶ್ರೀಮತಿ ಭಾರತಿ ಆರ್ ಮಂಜ ಮಡಾಮಕ್ಕಿ ಇವರು ಪ್ರಾಯೋಜಕರಾಗಿದ್ದರು.
ಕಾವ್ಯ ಎಂಟನೇ ತರಗತಿ ಸ್ವಾಗತಿಸಿದರು , ಧೃತಿ 10ನೇ ತರಗತಿ ವಂದಿಸಿದರು , ಐಶ್ವರ್ಯ ಎಂಟನೇ ತರಗತಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular