ಶಾಲೆಯಲ್ಲಿ ಪಠ್ಯವನ್ನು ಬೋಧಿಸುವಾಗ ಪ್ರಾಯೋಗಿಕ ವಿಧಾನವನ್ನು ಬಳಸಿಕೊಂಡಾಗ ಪರಿಣಾಮಕಾರಿ ಬೋಧನೆಯನ್ನು ನಿರೀಕ್ಷೆ ಮಾಡಬಹುದು.ಅದು ವಿಜ್ಞಾನ ಮತ್ತು ಗಣಿತ ಮೇಳಗಳಲ್ಲಿ ಭಾಗವಹಿಸಿದಾಗ ಪಠ್ಯದ ಸಂಪೂರ್ಣ ಲಾಭವನ್ನು ಪಡೆಯಬಹುದು ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪಾಂಡುರಂಗ ಪೈ ರವರು ಅಭಿಪ್ರಾಯ ಪಟ್ಟರು.
ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ವಿಜ್ಞಾನ ಮತ್ತು ಗಣಿತ ಮೇಳದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾಭಾರತಿಯು ಮಕ್ಕಳ ಜ್ಞಾನ ದಾಹವನ್ನು ನೀಗಿಸುತ್ತಾ , ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ, ಶಾಲಾ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ವಿದ್ಯಾಭಾರತಿ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ, ವಿಜ್ಞಾನ ವಿಷಯದ ಜಿಲ್ಲಾ ಪ್ರಮುಖ್ ಶ್ರೀಮತಿ ಸಂಧ್ಯಾ ಮಾತಾಜಿ, ಗಣಿತ ವಿಷಯದ ಜಿಲ್ಲಾ ಪ್ರಮುಖ್ ಶ್ರೀಮತಿ ಜ್ಯೋತಿ, ಸಂಸ್ಕೃತಿ ಜ್ಞಾನ ಜಿಲ್ಲಾ ಪ್ರಮುಖ್ ಕುಮಾರಿ ಜ್ಯೋತಿ ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಧಿಕಾ ರಾವ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿಜ್ಞಾನ ಮತ್ತು ಗಣಿತ ವಿಷಯಗಳ ವಿಷಯ ಶಿಕ್ಷಕರು ಭಾಗವಹಿಸಿದ್ದರು.