![](https://tulunaduvarthe.com/wp-content/uploads/2024/12/WhatsApp-Image-2024-12-18-at-12.54.35_ea96b8eb-1024x768.jpg)
ಕೇಂದ್ರ ಸರಕಾರದ ಯೋಜನೆಗಳಲ್ಲೊಂದಾದ ಉನ್ನತ ಭಾರತ ಅಭಿಯಾನದಡಿ ವಿಜ್ಞಾನ ಪ್ರಯೋಗದರ್ಶನ ಕಾರ್ಯಕ್ರಮವನ್ನು ಪಾಲಿಟೆಕ್ನಿಕ್ ನ ತಂಡ ಹಮ್ಮಿಕೊಂಡಿದೆ.
ಮೂಡಬಿದಿರೆ ಆಸುಪಾಸಿನ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ವಿಜ್ಞಾನ ಪಠ್ಯದಲ್ಲಿರುವ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಲಾಗುತ್ತಿದೆ. ಕಾಲೇಜಿನ ಪ್ರಾಂಶುಪಾಲ ಜೆಜೆ ಪಿಂಟೋ ಮಾರ್ಗದರ್ಶನದಲ್ಲಿ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಜೊತೆ ಸೇರಿ ಈಗಾಗಲೇ 15 ಪ್ರೌಢ ಶಾಲೆಗಳಿಗೆ ತೆರಳಿ ಪ್ರಯೋಗ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ನಡೆಸಲಾಗಿದ್ದು ಅಂದಾಜು ಒಟ್ಟು 30 ಶಾಲೆಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದೆ. ಒಂದು ಶಾಲೆಯಲ್ಲಿ ಒಂದು ದಿನದ ಕಾರ್ಯಕ್ರಮ ಇದಾಗಿದ್ದು ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಸಂಪೂರ್ಣ ಬೆಂಬಲ ಹಾಗೂ ಸಹಕಾರ ದೊರೆತಿದೆ