ಜಿಲ್ಲಾ ಮಟ್ಟದ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಯಲ್ಲಿ ಅದರ್ಶ ಹಡಗಲಿಗೆ ದ್ವೀತಿಯ ಸ್ಥಾನ
ಬೆಂಕಿ ನಂದಿಸುವ ಯಂತ್ರ ಮಾದರಿ ತಯಾರಿಕೆಯಲ್ಲಿ ಆದರ್ಶ ಹಡಗಲಿಗೆ ದ್ವೀತಿಯ ಸ್ಥಾನ
ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಧಾರವಾಡ ಇವರು ಮಕ್ಕಳ ದಿನಾಚರಣೆಯ ನಿಮಿತ್ತ 12 ನವೆಂಬರ್ 2025ರಂದು ಧಾರವಾಡ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಎಂಬ ವಿಷಾಯಾಧಾರಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಂಜುನಾಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ವರ್ಗದ ವಿದ್ಯಾರ್ಥಿ ಆದರ್ಶ ರವಿ ಹಡಗಲಿ ಇತನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಪ್ರದರ್ಶಸಿ ಸೂಕ್ತವಿವರಣೆ ನೀಡಿದ ಬೆಂಕಿಸೂಚಕ ವ ಬೆಂಕಿ ನಂದಿಸುವ ಮಾದರಿಯು ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಉಸ್ತುವಾರಿ ತರಗತಿ ಶಿಕ್ಷಕ ಸಾಹಿತಿಗಳಾದ ಸುಭಾಷ್ ಚವ್ಹಾಣ ಹೇಳಿದ್ದಾರೆ.
ವಿಜ್ಞಾನದಲ್ಲಿ ಆವಿಷ್ಕಾರ ನೂತನ ಮಾದರಿ ತಯಾರಿಸಿದ ಅದರ್ಶನಿಗೆ ರಾಜ್ಯ ಬಾಲವಿಕಾಸ ಅಕಾಡೆಮಿ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಬಹುಮಾನ ವಿತರಿಸಿ ಶುಭಕೋರಿದರು. ಮಕ್ಕಳ ದಿನಾಚರಣೆ ದಿಮ ೧೪ರಂದು ಬಾಲವಿಕಾಸ ಅಕಾಡೆಮಿಯಲ್ಲಿ ಮಹಕ್ಕಳ ಹಬ್ಬದ ಆಚರಿಸಲಿದ್ದು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳನ್ನು ಆವ್ಹಾನಿಸಿದರು ಮತ್ತು ಪ್ರಶಸ್ತಿ ಪತ್ರ ವಿತರಿಸುವುದಲ್ಲದೆ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದಾಗಿ ಹೇಳಿದರು.ಶಿಕ್ಷಣ ಪ್ರೇಮಿ ಚಿಕ್ಕಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿಯ ಅಧಿಕಾರಿಗಳಾದ ಕುಕನೂರ ಮೇಡಂ, ಸಂಯೋಜಕರಾದ ಶಿಶಿಧರ ಮುಂದಿನಮನಿ, ನಿರ್ಮಲಾ ಹಾಗೂ ತೀರ್ಪುಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಮಾರೋಪದಲ್ಲಿ ನೂರಾರು ಸ್ಪರ್ಧಾ ವಿದ್ಯಾರ್ಥಿಗಳು, ಪಾಲಕರು, ಕಲಾಪ್ರೇಮಿಗಳು ನೆರೆದಿದ್ದರು. ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿಗೆ ಸ್ಪರ್ಧೆಗಳು ಇದೇ ತಿಂಗಳು ೧೮ ಮತ್ತು ೧೯ ರಂದು ನಡೆಯುವ ಸಾಧ್ಯತೆಗಳಿದ್ದು; ವಿಜೇತ ವಿದ್ಯಾರ್ಥಿಗಳ ಖರ್ಚು ವೆಚ್ಚ ಇಲಾಕೆ ಭರಿಸಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಎಂ. ಫಡ್ನೇಶಿ, ಕ್ಷೇತ್ರ ಸಮನ್ವಾಧಿಕಾರಿಗಳಾದ ಅನುಸೂಯಾ ವಾಯ್. ಯಕ್ಕುಂಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ವ ಸರ್ವ ಸದಸ್ಯರು, ಶಾಲಾ ಪ್ರಗು ಹೆಚ್ ಬಿ ಕೊರವರ ಹಾಗೂ ಸರ್ವರುಮಾತೆಯರು ಅಭಿನಂದನೆ ಸಲ್ಲಿಸಿದ್ದಾರೆ.ವರದಿ: ಸುಭಾಷ್ ಹೇಮಣ್ಣಾ ಚವ್ಹಾಣ

