Wednesday, October 9, 2024
HomeUncategorizedಸುರತ್ಕಲ್‌ | ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರನಿಂದ ರಸ್ತೆ ಮಧ್ಯೆ ನಿಂತು ಪ್ರತಿಭಟನೆ!

ಸುರತ್ಕಲ್‌ | ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರನಿಂದ ರಸ್ತೆ ಮಧ್ಯೆ ನಿಂತು ಪ್ರತಿಭಟನೆ!

ಸುರತ್ಕಲ್:‌ ಅರೆಬರೆ ಕಾಂಕ್ರಿಟ್‌ ರಸ್ತೆಯಲ್ಲಿ ನಿರ್ಮಾಣವಾಗಿರುವ ಭಾರೀ ಗುಂಡಿಗೆ ಬಿದ್ದ ಸ್ಕೂಟರ್‌ ಸವಾರರೊಬ್ಬರು ರಸ್ತೆ ಮಧ್ಯೆ ನಿಂತು ಪ್ರತಿಭಟಿಸಿದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಸುರತ್ಕಲ್‌ ಜಂಕ್ಷನ್‌ನಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಹೊಂಡಕ್ಕೆ ಬಿದ್ದರೆ ಸಾಮಾನ್ಯವಾಗಿ ಎದ್ದು ಹೋಗುವವರೇ ಹೆಚ್ಚು. ಆದರೆ ಈ ವಾಹನ ಸವಾರ ರಸ್ತೆ ಮಧ್ಯೆ ತನ್ನ ವಾಹನ ನಿಲ್ಲಿಸಿ ಇತರ ವಾಹನ ಸವಾರರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಸಮೀಪದಲ್ಲೇ ಇದ್ದ ಟ್ರಾಫಿಕ್‌ ಎಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಫೈನ್‌ ಹಾಕುವುದರಲ್ಲಿ ನಿರತರಾಗಿದ್ದರು. ಈ ನಡುವೆ ವಾಹನ ಸವಾರನ ಪ್ರತಿಭಟನೆ ಎಲ್ಲರ ಗಮನ ಸೆಳೆಯಿತು. ರಸ್ತೆಯಲ್ಲಿ ಇಂತಹ ಗುಂಡಿಗಳಿಂದ ವಾಹನ ಸವಾರರಿಗೆ ಮುಕ್ತಿ ಎಂದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತು.

RELATED ARTICLES
- Advertisment -
Google search engine

Most Popular