Saturday, July 20, 2024
Homeಅಪಘಾತಸ್ಕೂಟ‌ರ್ - ಟೆಂಪೋ ನಡುವೆ ಮುಖಾಮುಖಿ ಅಪಘಾತ: ಸವಾರ ಸಾವು ಹಿಂಬದಿ ಸವಾರೆ ಗಂಭೀರ

ಸ್ಕೂಟ‌ರ್ – ಟೆಂಪೋ ನಡುವೆ ಮುಖಾಮುಖಿ ಅಪಘಾತ: ಸವಾರ ಸಾವು ಹಿಂಬದಿ ಸವಾರೆ ಗಂಭೀರ

ಉಡುಪಿಯ ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ ಸಂಭವಿಸಿದೆ. ಮೃತ ಉಚ್ಚಿಲ ಕಾಪು ತಾಲೂಕು ಪೊಲ್ಯ ಮೂಲದ ಪಡುಬಿದ್ರೆ ಕನ್ನಂಗಾರು ನಿವಾಸಿ ಮುಫ್ರೀನ್. ಹಿಂಬದಿ ಸವಾರೆಯಾಗಿದ್ದ ತಾಯಿ ಹಾಜಿರಾ ಎಂಬವರಿಗೆ ಗಂಭೀರ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಪು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಟೆಂಪೋ ಢಿಕ್ಕಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಾಯಗೊಂಡ 18ವರ್ಷದ ಮುಫ್ರೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular