Wednesday, October 9, 2024
Homeಮಂಗಳೂರುಶಿಲ್ಪಿ ಅರುಣ್ ಯೋಗಿರಾಜ್‍ಗೆ ವಿಶ್ವಕರ್ಮ ಕುಲ ತಿಲಕ’ ಬಿರುದು ಪ್ರದಾನ

ಶಿಲ್ಪಿ ಅರುಣ್ ಯೋಗಿರಾಜ್‍ಗೆ ವಿಶ್ವಕರ್ಮ ಕುಲ ತಿಲಕ’ ಬಿರುದು ಪ್ರದಾನ

ಮಂಗಳೂರು: ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ತಯಾರಕ ಅರುಣ್ ಯೋಗಿರಾಜ್ ಅವರಿಗೆವಿಶ್ವಕರ್ಮ ಕುಲತಿಲಕ’ ಬಿರುದು ನೀಡಿ ಸನ್ಮಾನಿಸಲಾಯಿತು. ರಥಬೀದಿಯ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ವತಿಯಿಂದ ಆಯೋಜಿಸಿದ್ದ `ಸಮರ್ಪಣಂ ಕಲೋತ್ಸವ’ ಕಾರ್ಯಕ್ರಮದಲ್ಲಿ ಅರುಣ್ ಯೋಗಿರಾಜ್ ಅವರಿಗೆ ಬಿರುದು ನೀಡಲಾಯಿತು. ಯೋಗಿರಾಜ್ ಅವರನ್ನು ಶೃಂಗಾರಗೊಂಡ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಭಾವುಕರಾದ ಅರುಣ್ ಯೋಗಿರಾಜ್ ದಾರಿಯುದ್ದಕ್ಕೂ ವಿನಮ್ರವಾಗಿ ನಮಸ್ಕರಿಸುತ್ತಾ ಸಾಗಿದರು.

ವಿಶ್ವಕರ್ಮ ಸಮುದಾಯದಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಕೋಟ್ಯಂತರ ಜನರ ಆಶೀರ್ವಾದದಿಂದ ಧನ್ಯನಾಗಿದ್ದೇನೆ. ಯುವ ತಲೆಮಾರು ಈ ಕಲೆಯನ್ನು ಕಲಿತು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಇದನ್ನು ಕಲಿಸುವ ಉದ್ದೇಶವಿದೆ’’ ಎಂದು ಅರುಣ್ ಹೇಳಿದರು.
ಆನೆಗುಂದಿ ಮಹಾಸಂಸ್ಥಾನ ಪೀಠಧೀಶ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ರಥಶಿಲ್ಪಿ ಲಕ್ಷ್ಮಿನಾರಾಯಣ ಕೋಟೇಶ್ವರ ಶುಭಾಶಂಸನೆಗೈದರು. ಉಪಾಧ್ಯಕ್ಷೆ ರತ್ನಾವತಿ ಜೆ ಬೈಕಾಡಿ ವರದಿ ವಾಚಿಸಿದರು. ಪಿ.ಎನ್. ಆಚಾರ್ಯ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ, ಅವಿಭಜಿತ ದ.P.À ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ವಿಜ್ಞಾನಿ ಜಿ.ಕೆ. ಆಚಾರ್ಯ, ಉದ್ಯಮಿ ಪ್ರಜ್ವಲ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ ಅಧ್ಯಕ್ಷ ಎಸ್ ಪಿ ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು. ಎನ್.ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular