ಶ್ರೀ ರಾಮಚಂದ್ರ ಮಾತೆ ಸೀತೆಯನ್ನು ಅಪಹರಿಸಿದ ದುಷ್ಟ ರಾವಣನ ಸಂಹಾರ ಮಾಡಿ, ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿ ಪಟ್ಟಾಭಿಷಿಕ್ತರಾದ ಸಂದರ್ಭ, ಶ್ರೀ ಕೃಷ್ಣ ಪರಮಾತ್ಮ ನರಕಾಸುರನ ಬಂಧನದಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಮುಕ್ತಿಗೊಳಿಸಿದ ದಿನ ಹಾಗೂ ಬಲಿ ಚಕ್ರವರ್ತಿಯನ್ನು ಪರಮಾತ್ಮನು ವಾಮನ ಅವತಾರದಲ್ಲಿ ಬಂದು ಪಾತಾಳ ಲೋಕಕ್ಕೆ ಕಳುಹಿಸಿದ ವಿಶೇಷ ಸಂದರ್ಭವನ್ನು ದೇಶದೆಲ್ಲೆಡೆ ದೀಪವನ್ನು ಹಚ್ಚಿ ಪಟಾಕಿ ಸಿಡಿಸಿ ಬೆಳಕಿನ ಹಬ್ಬವನ್ನಾಗಿ ಆಚರಿಸುತ್ತಾರೆ.
ಪ್ರತೀ ಭಾರಿಯಂತೆ ಈ ಬಾರಿಯೂ ಸರ್ಕಾರದ ಆದೇಶದಂತೆ ಸೂಕ್ತ ನಿಯಮಗಳ ಅನುಸಾರ ಬೀಡಿನಗುಡ್ಡೆಯ ಕೇಂದ್ರ ಮೈದಾನದಲ್ಲಿ ಹಲವು ಪಟಾಕಿ ಮಳಿಗೆಗಳು ತಲೆ ಎತ್ತಿವೆ ದಿನಾಂಕ 29-10-2024 ರಿಂದ 02-11-2024 ರ ವರೆಗೆ ಹಸಿರು ಪಟಾಕಿ ಮಾರಾಟವು ಇರಲಿದೆ. ಸ್ಟಾಲ್ ಸಂಖ್ಯೆ 5 ರಲ್ಲಿ ಎಸ್.ಡಿ.ಜಿ ಪಟಾಕಿ ಮಳಿಗೆ ಇದ್ದು ವಿವಿಧ ಫ್ಯಾನ್ಸಿ ಪಟಾಕಿಗಳ ಬೃಹತ್ ಸಂಗ್ರಹವನ್ನು ಹೊಂದಿದೆ. 1000ಕ್ಕೂ ಮೇಲ್ಪಟ್ಟ ಪ್ರತೀ ಖರೀದಿಗೆ ಲಕ್ಕಿ ಕೂಪನ್ ಇದ್ದು ಬಂಪರ್ ಬಹುಮಾನವಾಗಿ 8500/- ಮೌಲ್ಯದ ಡೆಕಥ್ಲೋನ್ ಬಿಟ್ವಿನ್ (ಮೈ ಬೈಕ್) ಸೈಕಲ್ ಹಾಗೂ ಸಮಾಧಾನಕರ ಬಹುಮಾನಗಳಿವೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ಗಳು ಇವೆ ಎಂದು ಮಾಲೀಕರಾದ ಶ್ರೀವತ್ಸ ಡಿ ಗಾಂವ್ಸ್‌ಕರ್ ಇವರು ತಿಳಿಸಿದ್ದಾರೆ.