ಶಿಬರೂರು: ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ, ಶ್ರೀ ಉಳ್ಳಾಯ, ಕೊಡಮಣಿತ್ತಾಯ, ಪರಿವಾರ ದೈವಗಳಿಗೆ ಹೋಮ, ಪಂಚಕಜ್ಜಾಯ ಸೇವೆಯು ಸೆ. 1ರಂದು ಸಂಜೆ 5.30ಕ್ಕೆ ನಡೆಯಲಿದೆ. ಭಕ್ತರು ಕೇಪಳ ಹೂ, ತುಳಸಿ, ಬಿಲ್ವಾಪತ್ರೆ, ಸೀಯಾಳ, ಹಣ್ಣುಗಳು ಕಾಣಿಕೆ ಸಹಿತ ಪೂಜೆಗೆ ಬೇಕಾದ ವಸ್ತುಗಳನ್ನು ಸಮರ್ಪಿಸಬಹುದಾಗಿದೆ ಎಂದು ಶಿಬರೂರುಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ತಿಳಿಸಿದ್ದಾರೆ.