Friday, March 21, 2025
Homeಕಿನ್ನಿಗೋಳಿಮುಲ್ಕಿ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ

ಮುಲ್ಕಿ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ

ಐಕಳ ಪೊಂಪೈ ಕಾಲೇಜು:- ಫೆಬ್ರವರಿ 8 ರಂದು ಮೂರು ಕಾವೇರಿಯಿಂದ ಪೊಂಪೈ ಕಾಲೇಜು ತನಕದ ಕನ್ನಡ ಭುವನೇಶ್ವರಿಯ ಮೆರವಣಿಗೆಯನ್ನು ಉದ್ಯಮಿ ಶ್ರೀನಿವಾಸ್ ಆಚಾರ್ಯ ಚಾಲನೆ ನೀಡಿದರು.
ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ರಾಷ್ಟ್ರ ಧ್ವಜ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಪರಿಷತ್ ಧ್ವಜವನ್ನು, ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಕನ್ನಡ ಧ್ವಜ ಆರೋಹಣ ಗೈದರು.
ಪೊಂಪೈ ಕಾಲೇಜು ಸಂಚಾಲಕ ರೆ.ಫಾ.ಓಸ್ವಾಲ್ಡ್ ಮೊಂತೆರೋ ವಸ್ತು ಪ್ರದರ್ಶನ ಉದ್ಘಾಟನೆ ಗೈದರು. ಶಾಸಕ ಉಮಾನಾಥ ಕೋಟ್ಯಾನ್ ಸಮ್ಮೇಳನ ಉದ್ಘಾಟಿಸಿ ಸಾಹಿತ್ಯ ಬೆಳೆಯುವದರಿಂದ ಜನರ ತಿಳುವಳಿಕೆ ಹೆಚ್ಚುತ್ತದೆ. ಇಷ್ಟು ಉತ್ತಮವಾಗಿ ಸಂಘಟನೆಗೊಂಡಿರುವುದು ಕಾರ್ಯಕರ್ತರ ಬದ್ಧತೆ ಸಾಬೀತು ಪಡಿಸುತ್ತದೆ ಎಂದು ಅಭಿನಂದಿಸಿದರು. ಮೈಸೂರು ಆಕಾಶವಾಣಿಯ ಅಬ್ದುಲ್ ರಶೀದ್ ಸಮ್ಮೇಳನಕ್ಕೆ ನುಡಿ ಸೇವೆ ಗೈದರು. ಕನ್ನಡ ಕೃತಿಗಳ ಬಿಡುಗಡೆ ಮಾಡಿದರು. ಪುಸ್ತಕ, ಪರಿಸರ ಪೂರಕ ವಸ್ತು, ಚಿತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್, ದ.ಕ.ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ವೇದಿಕೆಯಲ್ಲಿ ಹಾಜರಿದ್ದರು. ಕನ್ನಡ ನುಡಿ ಬೆಳಗಿ ರಾಷ್ಟ್ರ ದೇಶಾದ್ಯಂತ ಹರಡಲಿ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್. ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ ಸ್ವಾಗತಿಸಿದರು. ಕಿನ್ನಿಗೋಳಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹಿಲ್ಡಾ ಡಿಸೋಜ ವಂದಿಸಿದರು.

RELATED ARTICLES
- Advertisment -
Google search engine

Most Popular