ದ..ಕ.ಜಿಲ್ಲಾಡಳಿತ ,ದ.ಕ.,ಜಿಲ್ಲಾ ಪಂಚಾಯತ್, ಶಾಲಾ
ಶಿಕ್ಷಣ ಇಲಾಖೆ ಮತ್ತು ,ರಾಜ್ಯ ದ್ಯೆಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ಜರಗಿದ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಫ್ರೌಢ ಶಾಲಾ ಬಾಲಕ,ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 14 ರ ಕೆಳ ಹರೆಯದಲ್ಲಿ ಡಿಸ್ಕಸ್ ತ್ರೋ ವಿಭಾಗದಲ್ಲಿ ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ 8 ನೇ ತರಗತಿಯ ವಿದ್ಯಾರ್ಥಿ ಸೋಹಾನ್ ಎಸ್ ಪೂಜಾರಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.