ಕುಸ್ತಿಯ ಬೆಳವಣಿಗೆಗೆ ಕೈ ಜೋಡಿಸೋಣ:ದಿಲ್ ರಾಜ್ ಆಳ್ವ
ಕುಸ್ತಿ ಭಾರತದ ಮಣ್ಣಿನ ಕ್ರೀಡೆಯಲ್ಲಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪ್ರಸಿದ್ಧಿ ಪಡೆದು ಒಲಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದ್ದು ಇಲ್ಲಿ ಭಾರತೀಯ ಕುಸ್ತಿ ಪಟುಗಳ ಸಾಧನೆ ಬೆರಳೆಣಿಕೆಯಷ್ಟು ಮಾತ್ರಕಾಣಬವುದು. ಇದಕ್ಕೆ ಕಾರಣವನ್ನು ನೋಡಹೊರಟರೆ ದೇಶದ ಕೆಲವೊಂದು ರಾಜ್ಯಗನ್ನು ಹೊರತುಪಡಿಸಿದರೆ ಹೆಚ್ಚಿನ ರಾಜ್ಯಗಳಲ್ಲಿ ಕುಸ್ತಿಗೆ ಪ್ರೋತ್ಸಾಹ ಕಡಿಮೆಯೆಂದೇ ಹೇಳಬಹುದು.
ಮೈಸೂರು ಕುಸ್ತಿಗೆ ಪ್ರಖ್ಯಾತಿ ಹೊಂದಿರುವ ನಮ್ಮ ಕರ್ನಾಟಕರಾಜ್ಯದಲ್ಲಿ ಉತ್ತರ ಕರ್ನಾಟಕದ ಕೆಲವು ಬಾಗಗಳು ದಕ್ಷಿಣದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಕುಸ್ತಿಗೆ ಕುಸ್ತಿಪಟುಗಳಿಗೆ ದೊರೆಯುತ್ತಿರುವ ಪ್ರೋತ್ಸಾಹ ಅಷ್ಠಕಷ್ಟೇ.
ನಮ್ಮ ದಕ್ಷಿಣಕನ್ನಡ ಜೆಲ್ಲೆಯೂ ಅನೇಕ ಕುಸ್ತಿ ಪಟುಗಳನ್ನು ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ನೀಡಿದ್ದು ಇಂದಿಗೂ ಅನೇಕ ಗರಡಿಮನೆಗಳು ಕುಸ್ತಿಯ ಅಭ್ಯಾಸವನ್ನು ನೀಡುತ್ತಾ ಬಂದಿದೆ. ಮಾಜಿ ಶಾಸಕರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ|| ಎಂ.ಲೋಕಯ್ಯ ಶೆಟ್ಟಿ ಅವರ ಸಂಗಡಿಗರು ಸೇರಿ 50ದಶಕಗಳ ಹಿಂದೆ ತಮಗಿದ್ದ ದೂರದೃಷ್ಟಿಯ ಫಲವಾಗಿ ದಕ್ಷಿಣ ಕನ್ನಡ ಅಮೆಚೂರ್ ಕುಸ್ತಿ ಸಂಘವು ಖ್ಯಾತ ಕುಸ್ತಿಪಟು ಪೈಲ್ವಾನ್ ಧಾರಾಸಿಂಗ್ ಅವರ ಅಮೃತಹಸ್ತದಿಂದ ಉದ್ಘಾಟನೆಗೊಂಡು ಅಂದಿನಕಾಲದಲ್ಲಿಯೇ ರಾಷ್ಟ್ರಮಟ್ಟದಲ್ಲಿ ಕುಸ್ತಿಪಂದ್ಯಾಟಗಳನ್ನು ಮಂಗಳೂರಿನಲ್ಲಿ ಅಯೋಜಿಸಿದ್ದು ಇಂದು ಇತಿಹಾಸ.
ದ.ಕ. ಜಿಲ್ಲಾ ಅಮೆಚೂರ್ ಕುಸ್ತಿ ಸಂಘ (ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಸಂಘದ ಗೌರವಾಧ್ಯಕ್ಷ ರಾದ ಎಂ.ಸುರೇಶ್ಚಂದ್ರ ಶೆಟ್ಟಿ ಯವರ ಸಭಾಧ್ಯಕ್ಷತೆಯಲ್ಲಿ ದಿ. 29.01.23 ರವಿವಾರ ನಗರದ ಹೋಟೇಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವಾಧ್ಯಕ್ಷರಾಗಿ ಎಂ. ಸುರೇಶ್ಚಂದ್ರ ಶೆಟ್ಟಿ ಯವರು ಪುನರಾಯ್ಕೆ ಯಾಗಿ, ನೂತನ ಅಧ್ಯಕ್ಷರಾಗಿ ದಿಲ್ ರಾಜ್ ಆಳ್ವ ಇವರು ಸರ್ವಾನುಮತದಿಂದ ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಶೆಟ್ಟಿ, ಕೋಶಾಧಿಕಾರಿಯಾಗಿ ಸತೀಶ್ ಬೆಂಗ್ರೆ, ಜಂಟಿ ಕಾರ್ಯದರ್ಶಿಯಾಗಿ ಶಿವರಾಜ್ ಬೈಕಂಪಾಡಿ, ಹಾಗೂ ಉಪಾಧ್ಯಕ್ಷರಾಗಿ ರೋಹಿದಾಸ್ ಬಂಗೇರ, ಯುವರಾಜ್ ಪುತ್ರನ್, ಅರುಣ್ ಪುತ್ರನ್, ಜುಲ್ಫಿಕರ್ ಅಲಿ ಇವರು ಆಯ್ಕೆಯಾದರು. ನಿರ್ಗಮಿತ ಪದಾಧಿಕಾರಿಗಳಾದ ಅಧ್ಯಕ್ಷ – ಸುಖಪಾಲ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜೀಶಾನ್ ಅಲಿ, ಕೋಶಾಧಿಕಾರಿ- ರಿತೇಶ್, ಜಂಟಿ ಕಾರ್ಯದರ್ಶಿ ಶಿವರಾಜ್ರವರು ನೂತನ ಪದಾಧಿಕಾರಿಗಳನ್ನು ಸ್ವಾಗತಿಸಿದರು
ಹೊಸ ಜವಾಬ್ದಾರಿಗಳನ್ನು ಹೊರುವಾಗ ಅನೇಕ ಸವಾಲುಗಳು ಕೂಡಾ ನಮ್ಮ ಮುಂದಿರುತ್ತದೆ. 50ವರ್ಷಕಳೆದರೂ ಸಂಘಕ್ಕೆ ಬೇಕಾದ ಮೂಲಸೌಕರ್ಯವಾದ ಸಭಾಂಗಣ, ಕುಸ್ತಿಯವೇದಿಕೆ ನಿರ್ಮಾಣ, ಕುಸ್ತಿಪಟುಗಳಿಗೆ ಮಾರ್ಗದರ್ಶನ ಹಾಗೂ ಸರ್ಕಾರಿ ಸವಲತ್ತುಗಳನ್ನು ಒದಗಿಸುವಲ್ಲಿ ಸರ್ಕಾರದ ಗಮನ ಸೆಳೆಯುವ ಅದರ ಅವಶ್ಯಕತೆಗಳನ್ನು ಸರ್ಕಾರಕ್ಕೆ ತಿಳಿಪಡಿಸುವ ಕಾರ್ಯಗಳು ಮುಂದೆ ನಡೆಯಬೇಕಿದ್ದು. ನಮ್ಮ ದೇಶಿಯ ಕ್ರೀಡೆಯ ಉಳಿವು ಅಂತಾರಾಷ್ಟ್ರೀಯ ಕೂಟಗಲ್ಲಿ ಭಾರತದ ಪತಾಕೆಯನ್ನು ಹಾರಿಸಲು ಕ್ರೀಡಾಳುಗಳಿಗೆ ಬೇಕಾದ ಪ್ರೋತ್ಸಾಹ ಮೂಲಸೌಕರ್ಯಗಳ ಪೂರೈಕೆ ಇವೆಲ್ಲ ನಮ್ಮ ಆಧ್ಯತೆಯಾಗಿದ್ದು ಕುಸ್ತಿಯ ಬೆಳವಣಿಗೆಗೆ ಕೈ ಜೋಡಿಸೋಣ ಎಂದು ನೂತನ ಅಧ್ಯಕ್ಷರಾಗಿದ ಶ್ರೀ ದಿಲ್ ರಾಜ್ ಆಳ್ವ ನುಡಿದರು.