ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಹಾವೇರಿ ಜಿಲ್ಲಾಧ್ಯಕ್ಷರಾಗಿ ಪರಮೇಶ್ವರಯ್ಯ ವೀರಭದ್ರಯ್ಯ ಮಠದ ರವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಕಲಾಕುಂಚ ಸಂಸ್ಥೆಯು ಕೇರಳ ರಾಜ್ಯದ ಶಾಖೆ ಸೇರಿದಂತೆ ವಿವಿಧ ಜಿಲ್ಲೆ, ಬಡಾವಣೆಗಳಲ್ಲಿ ಶಾಖೆಗಳನ್ನು ಸೃಷ್ಟಿಸುತ್ತಿದ್ದು ಸಾರ್ವಜನಿಕವಾಗಿ ಅವಕಾಶವಂಚಿತ ಅಪ್ರತಿಮ ಪ್ರತಿಭೆಗಳ ಕಲಾವಿದರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಶೈಕ್ಷಣಿಕ ಕಾಳಜಿಯ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸುವ ಸದುದ್ದೇಶ ಈ ಸಂಸ್ಥೆಯದು. ಕಲೆ, ಸಾಹಿತ್ಯ, ಸಂಗೀತ, ಕನ್ನಡಪರ ಕಾಳಜಿಯ ನಿರಂತರ ಸೇವೆ ಮಾಡುತ್ತಿರುವ ಮಠದವರನ್ನು ಕಲಾಕುಂಚ ಹಾವೇರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಸೇರಿದಂತೆ, ಸರ್ವ ಸದಸ್ಯರು, ಪದಾಧಿಕಾರಿಗಳು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.