Saturday, June 14, 2025
Homeಕಾರ್ಕಳಸುರಾಕ್ಷ ಆಶ್ರಮಕ್ಕೆ ಭೇಟಿ ನೀಡಿದ ಸ್ವಸಹಾಯ ಗ್ರೂಪ್ ಸಂಘ

ಸುರಾಕ್ಷ ಆಶ್ರಮಕ್ಕೆ ಭೇಟಿ ನೀಡಿದ ಸ್ವಸಹಾಯ ಗ್ರೂಪ್ ಸಂಘ

ಕ್ರೈಸ್ತ ರಾಯ ಚಚ್೯ನ ಒಳಪಟ್ಟ, ಸಂತ ಲಾರೆನ್ಸ್ ವಾಡು೯, ಸಂತೆಕಟ್ಟೆ, ಕಾಕ೯ಳ,ಜ್ಯೋತಿ ಸ್ವಸಹಾಯ, ಉದಯ ಸ್ವಸಹಾಯ ಹಾಗೂ ಉನ್ನತಿ ಸ್ವಸಹಾಯ ಗ್ರೂಪ್ ಕಾಕ೯ಳ ಇದರ ವತಿಯಿಂದ ಸುರಾಕ್ಷ ಆಶ್ರಮಕ್ಕೆ ಭೇಟಿ. ವಾರದ ಹಿಂದೆಯೇ ಭೇಟಿಯಾಗಲು ಯೋಜಿಸಿದ್ದೆವು, ಆದರೆ ನಮ್ಮ ವಾಡಿ೯ನ ಹಿರಿಯ ಸದಸ್ಯರೊಬ್ಬರು ತೀರಿಕೊಂಡಿದ್ದರಿಂದ ಬರಲಾಗದೆ ಈ ದಿನವನ್ನು ದೇವರು ಕರುಣಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಎಲ್ಲಾ ತರಹದ ಅಡುಗೆ ಜಿನಸಿ ಸಾಮಾಗ್ರಿಗಳನ್ನು ಸ್ವಲ್ಪ ದಿನಗಳ ಊಟದ ವ್ಯವಸ್ಥೆಗೆ ನೀಡಿದೆವು. ಈ ಸಮಯದಲ್ಲಿ ಹೆನ್ರಿ ಸಾಂತ್ ಮಯೋರ್ ಇವರ 67ನೇ ಹುಟ್ಟು ಹಬ್ಬದ ಸಲುವಾಗಿ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿದರು. ಎಲ್ಲಾ ಮಾನಸಿಕ, ರೋಗಿಷ್ಟರು ಹಾಗೂ ಪ್ರಾಯಸ್ಥರ ಸೇವೆ ತುಂಬಾ ಕಠಿಣ, ತಮ್ಮ ತಾಯಿ ತಂದೆಯರ ಶಿಶು೯ಸೆನೇ ಮಾಡಲಾಗುವುದಿಲ್ಲ ಆ ನಿಟ್ಟಿನಲ್ಲಿ ದಾರಿಯಲ್ಲಿ ಬಿದ್ದವರನ್ನು, ಗತಿ ಇಲ್ಲದವರನ್ನು, ಆರೋಗ್ಯ ಕೆಟ್ಟ ಪ್ರಾಯಸ್ಥರ ಸೇವೆಯೆಂದರೆ ಇದೇ ದೇವರ ಪ್ರೇರಣೆ. ಸುರಕ್ಷ ಆಶ್ರಮದ ನಿದೇ೯ಶರಾದ ಆಯಿಶಾ ಬಾನು ಹಾಗೂ ಸಿಬ್ಬಂದಿಯರು ಶುಶ್ರೂಷೆ ಚೆನ್ನಾಗಿ ಮಾಡಿದ್ದರಿಂದ ಆಯು, ಆರೋಗ್ಯ,ಭಗವಂತ ಕರುಣಿಸಲಿ. ನಮಗೆಲ್ಲಾರಿಗೂ ಆಶ್ರಮದ ಬೇಟಿ ಖುಷಿಯಾಗಿದೆ. ಆಶ್ರಮದಲ್ಲಿ ಸರಿ ಸುಮಾರು 78 ಜನ ನಿರಾಶ್ರಿತರು ವಾಸವಾಗಿದ್ದರು.
ಈ ಸಮಯಾದಿ ಚಚ್೯ ಮಂಡಳಿ ಕಾಯ೯ದಶಿ೯ ಹಾಗೂ ಸಂತೆಕಟ್ಟೆ ವಾಡ್೯ನ ಮುಖ್ಯೆ ವಿನಿತಾ ಡಿ’ಮೆಲ್ಲೊ, ಕಥೋಲಿಕ್ ಸಭಾ ಕೇಂದ್ರದ ಕಾಯ೯ದಶಿ೯ ಒಲಿವಿಯಾ ಡಿ’ಮೆಲ್ಲೊ, ಪತ್ತೊಂಜಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ,ಗ್ರೇಸಿಯಾ ಡಿ’ಸೋಜ, ವಿಕ್ಟರ್ ಡಿ’ಸೋಜ, ಪಾಸ್ಕಲ್ ಮೋನಿಸ್, ಇವತ್ತಿನ 67ನೇ ಬತ್೯ಡೇ ಬೊಯ್, ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಹಾಗೂ ವಾಡ್೯ನ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿದ್ದರು.
ಶಾಂತಿ ಡಿ’ಅಲ್ಮೇಡಾ ಇವರು ಎಲ್ಲಾರನ್ನು ಪರಿಚಯಿಸಿದರು, ಗ್ರೇಸಿಯಾ ಡಿ’ಸೋಜರು ಧನ್ಯವಾದವಿತ್ತರು.

RELATED ARTICLES
- Advertisment -
Google search engine

Most Popular