ದೈನಂದಿನ ಪ್ರಾರ್ಥನೆ ಸರಸ್ವತಿ ವಂದನೆಯಲ್ಲಿ ಭಾಗಿ
ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉದ್ಯೋಗ ನಡೆಸುತ್ತಿರುವ ಕಡಮಜಲು ವಿಪುಲ್ ಎಸ್ ರೈ ಇವರು ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇವರು ಕಾಲೇಜಿನ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆಯಲ್ಲಿ ದೀಪ ಪ್ರಜ್ವಲಿಸಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ
ಭಾಗವಹಿಸಿದರು. ನಂತರ ಮಾತನಾಡಿದ ಅವರು &quoಣ;ವಿವೇಕಾನಂದ ಪದವಿಪೂರ್ವ ಕಾಲೇಜು, ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಇಲ್ಲಿ ಇಂದು ಸರಸ್ವತಿ ವಂದನೆಯಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ ನನಗೆ ನನ್ನ ಕಾಲೇಜಿನ ದಿನಗಳು ನನಗೆ ಮರುಕಳಿಸುತ್ತಿವೆ. ಮತ್ತೊಮ್ಮೆ ಈ ವಿದ್ಯಾಸಂಸ್ಥೆಗೆ ಆಗಮಿಸಿ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸುವ ಅವಕಾಶ ನೀಡಿದ್ದಕ್ಕೆ ನಾನು ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನನಗೆ ಮಾರ್ಗದರ್ಶನ ನೀಡಿದ ಎಲ್ಲಾ ಗುರು ವೃಂದದವರನ್ನು ಸ್ಮರಿಸುತ್ತಾ ಅವರಿಗೆ ವಂದಿಸುತ್ತೇನೆ&quoಣ; ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ.,
ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ Iಓಓಔಓಘಿಖಿ ಸಂಸ್ಥೆಯ ಡಾ. ಅನು ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ದೈನಂದಿನ ಪ್ರಾರ್ಥನೆಯಲ್ಲಿ ಭಾಗವಹಿಸಿದರು.