ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದ ನಾಗರಾಜ ನಾಗರಾಣಿಯರ ಸಾನಿಧ್ಯದಲ್ಲಿ ಇದೇ ತಿಂಗಳ ತಾರೀಕು 12ರ ಗುರುವಾರದಂದು ನಾಗ ತಾನು ತರ್ಪಣ ಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಖ್ಯಾತ್ ಭಟ್ ನೇತ್ರತ್ವದಲ್ಲಿ ಕಾರ್ಕಳದ ಮಿಯಾರಿನ ಶ್ರೀಯುತ ವೀರಜ್ ಶೆಟ್ಟಿ ಮತ್ತು ಮನೆಯವರ ಬಾಪ್ತು ಪ್ರಾಯಶ್ಚಿತ್ತ ಪೂರ್ವಕವಾಗಿ ಕ್ಷೇತ್ರದಲ್ಲಿ ಸಮರ್ಪಿತವಾಗಲಿದೆ.
ಆ ಪ್ರಯುಕ್ತ ನಾಗಾಲಯದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ,ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ, ಪಂಚವರ್ನಾತ್ಮಕವಾದ ತನು ತರ್ಪಣ ಮಂಡಲ ರಚನೆಯ ಆರಂಭ.. ಅನ್ನ ಸಂತರ್ಪಣೆ
ಸಂಜೆ ಗಂಟೆ 5 ರಿಂದ ನಾಗ ತನು ತರ್ಪಣ ಮಂಡಲ ಸೇವೆ ಆರಂಭವಾಗಲಿದೆ.
ಕಲ್ಲಂಗಳ ರಾಮಚಂದ್ರ ಕುಂಚಿತ್ತಾಯ ಅವರಿಂದ ನಾಗ ಸಂದರ್ಶನ ನಡೆಯಲಿದೆ. ಮುರಳಿದರ ಮುದ್ರಾಡಿ ಮತ್ತು ತಂಡದವರಿಂದ ವಿಶೇಷ ನಾದಸ್ವರ ವಾದನ, ಕುಡುಪು ನಾಗೇಂದ್ರ ಮತ್ತು ಬಳಗದವರಿಂದ ಉಡುಕಿ ನಾದ ವಿಶೇಷ ಆಕರ್ಷಣೆಯಾಗಿ ಮೂಡಿ ಬರಲಿದೆ.
ಶ್ರೀ ಗುರೂಜಿಯವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರದ ನಾಗಾಲಯದಿಂದ ಅನುಗ್ರಹಿತಗೊಂಡು
ನಾಗದೋಷದಿಂದ ವಿಮುಕ್ತರಾದ ಸೇವಾ ಕರ್ತರು ಕೃತಜ್ಞತಾ ಪೂರ್ವಕವಾಗಿ ಸಮರ್ಪಿಸುವ ಈ
ಪೂಜೆಯ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ, ಕನ್ನಿಕರಾದನೆ ಆಚಾರ್ಯ ಪೂಜೆ ದಂಪತಿ ಪೂಜೆ ಬ್ರಹ್ಮಚಾರಿ ಆರಾಧನೆಗಳು ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
ಸೆ.12: ಶ್ರೀ ಚಕ್ರ ಪೀಠ ಸುರ ಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆಯಲ್ಲಿ ನಾಗ ತನು ತರ್ಪಣ ಮಂಡಲ ಸೇವೆ
RELATED ARTICLES