Thursday, April 24, 2025
HomeUncategorizedಲಯನ್ಸ್ ಕ್ಲಬ್ ವತಿಯಿಂದ ಇದೇ 16 ರಂದು ಕಾಸಿಯಾ ಸಭಾಂಗಣದಲ್ಲಿ ಸೇವಾ ಚಟುವಟಿಕೆ

ಲಯನ್ಸ್ ಕ್ಲಬ್ ವತಿಯಿಂದ ಇದೇ 16 ರಂದು ಕಾಸಿಯಾ ಸಭಾಂಗಣದಲ್ಲಿ ಸೇವಾ ಚಟುವಟಿಕೆ

ಬೆಂಗಳೂರು: ಬೆಂಗಳೂರಿನ ಲಯನ್ಸ್ ಅಂತರಾಷ್ಟ್ರೀಯ ಟೀಮ್ ಸ್ಪರ್ಶ, ಡಿಸ್ಟ್ರಿಕ್ಟ್ 317ಎ ವತಿಯಿಂದ ಪ್ರದೇಶ- IV ರ ಪ್ರಾದೇಶಿಕ ಸಭೆ,

ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ 16 ರ ಭಾನುವಾರ ಮಧ್ಯಾಹ್ನ 3.30 ರಿಂದ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಆಶಾ ದೀಪ ವೃದ್ಧಾಶ್ರಮಕ್ಕೆ, ಲಯನ್ಸ್ ಕಣ್ಣಿನ ಆಸ್ಪತ್ರೆಗೆ, ಮತ್ತು ಹಸಿವು ನಿವಾರಣಾ ಯೋಜನೆಗಳಿಗೆ ತಲಾ 25 ಸಾವಿರ ರೂಪಾಯಿ ದೇಣಿಗೆ ಅಲ್ಲದೇ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಸ್ಯಾನಿಟರ್ ಪ್ಯಾಡ್ ವಿತರಣಾ ಯಂತ್ರವನ್ನು ಎಲ್ ಸಿ ಬಿ ಬನಶಂಕರಿ ಕ್ಲಬ್ಬೆ ಡಯಾಲಿಸಿಸ್‌ ಯಂತ್ರವನ್ನು ಎಲ್ ಸಿ ಬಿ ಜ್ಞಾನಯೋಗ ಯೋಗ ಕೇಂದ್ರಕ್ಕೆ, ಬುಗಿ ವ್ಯಾನ್ ಅನ್ನು ಹಿರಿಯರ ಅನುಕೂಲಕ್ಕಾಗಿ ಜಿಗಣಿಯ ವಿವೇಕಾನಂದ ವಾಸ ಯೂನಿವರ್ಸಿಟಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ, ಇನ್ನೂ ಹಲವು ದೇಣಿಗೆಗಳನ್ನು ನೀಡಲಾಗುತ್ತಿದ್ದು

ಮುಖ್ಯ ಅತಿಥಿ ಭಾಷಣಕಾರರಾಗಿ ನಿಮ್ಹಾನ್ಸ್ ನ ಪದ್ಮಶ್ರೀ ಡಾ. ಸಿ.ಆರ್ ಚಂದ್ರಶೇಖರ್ ರವರು ಲಯನ್ಸ್ ಜಿಲ್ಲೆಯ ಮಾಜಿ ರಾಜ್ಯಪಾಲರುಗಳು ಹಾಗೂ ಪದಾಧಿಕಾರಿಗಳು, ಕ್ಲಬ್ಬಿನ ಸದಸ್ಯರುಗಳು, ಅತಿಥಿಗಳಾಗಿ ಪಾಲ್ಗೊಳ್ಳುವರು.

ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ರೀಜನಲ್ ಚೇರ್ ಪರ್ಸನ್ ಲಯನ್ ಸೋಮಲತಾ, ಚೇರ್ಮನ್ ಲಯನ್ ಮಲ್ಲೇಶಯ್ಯ,ಮತ್ತಿತರರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಮಾಧ್ಯಮ ವಿಭಾಗದ ಅಧ್ಯಕ್ಷರು ಲಯನ್ ಡಾ. ಉಮೇಶ್ ಕುಮಾರ್ ತಿಳಿಸಿದರು, ಲಯನ್ ಗಾಯತ್ರಿ ಗಿರೀಶ್ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular