ಲಯನ್ಸ್ ಕ್ಲಬ್ ಮಂಗಳೂರು ಸದಸ್ಯರ ನೆರವಿನಿಂದ ಸುಮಾರು 35 ಸಾವಿರ ರೂಪಾಯಿ ಸೇವಾ
ಚಟುವಟಿಕೆಗಳನ್ನು ಸರಕಾರಿ ಶಾಲಾ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪ್ರಾಥಮಿಕ ಶಾಲೆ
, ಬೋಳಾರ್ ಪಶ್ಚಿಮ , ಇದರ ಶಿಕ್ಷಕಿ ಗೀತಾ ಸಲ್ಡಾನ್ಹಾ ಅವರ ಆಶಯದ ಮೇರೆಗೆ ಬಿಹಾರ
ಮೂಲದ ಕೊಳಚೆ ಪ್ರದೇಶದ 55 ಮಕ್ಕಳನ್ನು ಹುಡುಕಿ ಅವರಿಗೆ ಕನ್ನಡದಲ್ಲಿ ಶಿಕ್ಷಣವನ್ನು
ನೀಡುತ್ತಿದ್ದಾರೆ.
ಪ್ರತಿ ವಿದ್ಯಾರ್ಥಿಗೆ ಒಂದು ಜೋಡಿ ಸಮವಸ್ತ್ರವನ್ನು, ಶಾಲಾ ಬ್ಯಾಗ್ ಗಳನ್ನು ಪೂರ್ವ
ಅಧ್ಯಕ್ಷರುಗಳಾದ ರೊನಾಲ್ಡ್ ಮಸ್ಕರೇನ್ಹಸ್, ಕೃಷ್ಣಾನಂದ ಪೈ ಅವರು ನೀಡಿದರು. ಪುಸ್ತಕ,
ಪೆನ್ನು, ಪೆನ್ಸಿಲ್, ರಬ್ಬರ್, ಬಳಪ ಇತ್ಯಾದಿ ಸಾಮಗ್ರಿಗಳನ್ನು ಉಪಾಧ್ಯಕ್ಷ ರಾಜೇಶ್ ಕಾಮತ್
ನೀಡಿದರು. ರಿಚರ್ಡ್ ಮತ್ತು ಆಲಿಸ್ ಲೋಬೊ ಅವರಿಂದ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ, ಪೂರ್ವ ರಾಜ್ಯಪಾಲ
ಎಂ. ಅರುಣ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಜ್ ಪ್ರಕಾಶ್, ಕೋಶಾಧಿಕಾರಿ ನಾರಾಯಣ
ಕೋಟ್ಯಾನ್, ಜಂಟಿ ಕಾರ್ಯದರ್ಶಿ ನ್ಯಾನ್ಸಿ ಮಸ್ಕರೇನ್ಹಸ್, ಸದಸ್ಯರಾದ ಆಸೀಫ್ ಮೊಹಮ್ಮದ್,
ಸುಧಾಮ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿಶಂಕರ್ ರೈ ವಂದಿಸಿದರು.