ಉಡುಪಿ ಜಿಲ್ಲೆಯಲ್ಲಿರುವಂತಹ 13,000 ಕ್ಕಿಂತಲೂ ಅಧಿಕ ದಿವ್ಯಾಂಗರ ವಿವಿಧ ಬೇಡಿಕೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬ್ರಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯರು ಹಾಗೂ ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆಯ ಸಂಚಾಲಕರಾದ ವಿಜಯ್ ಕೊಡವೂರು ಮಾತನಾಡಿ ದಿವ್ಯಾಂಗರ ಸೇವೆಯೇ ದೇವರ ಸೇವೆ ದಿವ್ಯಾಂಗರ ವಿವಿಧ ಬೇಡಿಕೆಗಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಸರಕಾರವು ಇವರ ಪ್ರಾಥಮಿಕ ಬೇಡಿಕೆಗಳನ್ನು ಸ್ಪಂದಿಸುವ ಅವಶ್ಯಕತೆ ಇದೆ. ಜಿಲ್ಲೆಯ ಮಟ್ಟದಲ್ಲಿ ಆಗುವ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು ಸ್ಪಂದನೆ ಮಾಡಬೇಕು ಎಂದು ವಿಜಯ್ ಕೊಡವೂರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತವಿರುವ ಸಾವಿರಾರು ದಿವ್ಯಾಂಗರು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬ್ರಹತ್ ಪ್ರತಿಭಟನೆ ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೆಯ ಬಳಿ ಪ್ರತಿಭಟನೆ ನಡೆಯಿತು.