ಉಡುಪಿ ಜಿಲ್ಲೆ ಶಂಕರಪುರದಲ್ಲಿ ಏಕ ಜಾತಿ ಧರ್ಮ ಪೀಠ ಸ್ಥಾಪಿಸಿ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಕ್ರಮಗಳೊಂದಿಗೆ ಯೋಧರು ರಾಷ್ಟ್ರ- ಹಿಂದುತ್ವ ಪರವಾಗಿ ಅನೇಕ ಸೇವಾಯೋಜನೆಗಳಿಂದ ಈಗಾಗಲೇ ದೇಶ ವಿದೇಶದ ಸಾವಿರಾರು ಭಕ್ತರನ್ನು ತನ್ನಡೆಗೆ ಕೈ ಬಿಸಿ ಕರೆಯುವ. ಪುಣ್ಯ ಧಾರ್ಮಿಕ ಕ್ಷೇತ್ರವಾಗಿ ಜಗತ್ಪ್ರಸಿದ್ಧಿಯನ್ನು ಪಡೆಯುತ್ತಿದೆ.
ಈ ಪುಣ್ಯ ಕ್ಷೇತ್ರದ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಸಮಾಜಕ್ಕೆ ನೀಡಿದ ಸೇವೆಯ ಫಲವಾಗಿ ಪ್ರಶಾಂತಿ ಸದ್ಭಾವನಾ ಟ್ರಸ್ಟ್ (ರಿ ) ಪುತ್ತೂರು ಮತ್ತು ಶ್ರೀ ಶಿರಡಿ ಸಾಯಿ ಕೇಂದ್ರ ಪುತ್ತೂರು ಜಂಟಿಯಾಗಿ ಜೀವಿತಾವಧಿಯ ಸೇವಾ ಕಾರ್ಯಗಳಿಗೆ ಅರ್ಪಿಸುವ ಭಗವಾನ್ ಶ್ರೀ ಸತ್ಯಸಾಯಿ ಸದ್ಗುರು – ಶ್ರೀ ಮಧುಸೂದನ್ ಸಾಯಿ ಅನುಗ್ರಹಿತ “ಸೇವಾವಧೂತ” ಗೌರವ ಪ್ರಶಸ್ತಿಯನ್ನು 20/10/2024 ಭಾನುವಾರ ಅಜ್ಜೇರು ಶ್ರೀಮತಿ ರತ್ನಾವತಿ ಪ್ರಭು ರವರ 70ನೇ ಜನ್ಮ ದಿನೋತ್ಸವದ ಸಂದರ್ಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.