Wednesday, September 11, 2024
Homeಉಡುಪಿಉಡುಪಿ | ಹಾಡಹಗಲೇ ನಗರದಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ

ಉಡುಪಿ | ಹಾಡಹಗಲೇ ನಗರದಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ

ಉಡುಪಿ: ನಗರದಲ್ಲಿ ಹಾಡಹಗಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್‌ ಸರ್ಕಲ್‌ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರು ನಿಲುಗಡೆಗೊಳಿಸಿ ಒಳಭಾಗದಲ್ಲಿ ಯುವಕ ಮತ್ತು ಯುವತಿ ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿದ್ದರು. ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಯುವಕ, ಯುವತಿ ಸ್ಥಳದಿಂದ ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಲಾಗಿತ್ತು. ಆದರೆ ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದಾಗ ಅನೈತಿಕ ಚಟುವಟಿಕೆಯಲ್ಲಿ ಇಬ್ಬರು ನಿರತರಾಗಿರುವುದು ಕಂಡುಬಂದಿದೆ. ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಇಬ್ಬರು ಮುಜುಗರದಿಂದ ಪರಾರಿಯಾದರು ಎನ್ನಲಾಗಿದೆ. ಕಳೆದ ಒಂದು ವಾರದಿಂದ ಕಾರು ಅನುಮಾನಾಸ್ಪದವಾಗಿ ನಿಲ್ಲುತ್ತಿತ್ತು ಎನ್ನಲಾಗಿದೆ.

Previous article
ಹೆಚ್ ಸಿಎಲ್ 80ನೇ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ಶಿಪ್ ಬಾಂಬೆ ಜಿಮ್ಖಾನಾ ಕ್ಲಬ್‌ ನಲ್ಲಿ ಆರಂಭ
Next article
RELATED ARTICLES
- Advertisment -
Google search engine

Most Popular