Wednesday, July 24, 2024
Homeಪುತ್ತೂರುಸುಳ್ಯ | ವಿದ್ಯಾರ್ಥಿನಿಗೆ ಅಪರಿಚಿತನಿಂದ ಕಿರುಕುಳ; ಆರೋಪಿ ಪರಾರಿ

ಸುಳ್ಯ | ವಿದ್ಯಾರ್ಥಿನಿಗೆ ಅಪರಿಚಿತನಿಂದ ಕಿರುಕುಳ; ಆರೋಪಿ ಪರಾರಿ

ಸುಳ್ಯ: ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಬಗ್ಗೆ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಪ್ಯೂಟರ್ ತರಗತಿ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಸುಳ್ಯದ ಕಲ್ಲುಮುಟ್ಲುವಿನ ಯುವತಿ ಪೇಟೆಯಿಂದ ಗಾಂಧಿನಗರದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ಯುವಕ ಹಿಂಬಾಲಿಸಿದ್ದಲ್ಲದೆ ಪ್ರೀತಿಸುವುದಾಗಿ ಹೇಳಿದ್ದ. ಈ ವಿಚಾರ ಯುವತಿ ತನ್ನ ತಂದೆಗೆ ತಿಳಿಸಿದ್ದು, ತಂದೆ ಬಂದ ತಕ್ಷಣ ಹೋಟೆಲೊಂದಕ್ಕೆ ನುಗ್ಗಿದ ಆರೋಪಿ ಹಿಂಬಾಗಿಲಿನ ಮೂಲಕ ತಪ್ಪಿಸಿಕೊಂಡಿದ್ದಾನೆ. ಸುಳ್ಯ ನಗರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular