ಬಂಟ್ವಾಳ: ವಿವಾಹಿತ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಅನ್ಯಕೋಮಿನ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕರಿಯಂಗಳದಲ್ಲಿ ಈ ಘಟನೆ ನಡೆದಿದೆ. ಕರಿಯಂಗಳ ನಿವಾಸಿ ತಸ್ಸೀಫ್ ಆರೋಪಿ ಎಂದು ಗುರುತಿಸಲಾಗಿದೆ.
ಮಗಳನ್ನು ಟ್ಯೂಶನ್ ಸೆಂಟರ್‌ಗೆ ಬಿಟ್ಟು ಹಿಂದಿರುಗುವಾಗ ಮಹಿಳೆಯನ್ನು ಅಡ್ಡಗಟ್ಟಿದ ಆರೋಪಿಯು ಆಕೆಯ ಎದೆ ಭಾಗಕ್ಕೆ ಕೈ ಹಾಕಿ ಕಿರುಕುಳ ನೀಡಿದ್ದಾನೆ. ನೀನು ನನಗೆ ಬೇಕು. ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂದು ಆರೋಪಿಯು ಬೆದರಿಕೆಯೊಡ್ಡಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.