Friday, May 16, 2025
Homeರಾಜ್ಯಸ್ಪೋರ್ಟ್ಸ್‌ ಹೇಳಿಕೊಡುವ ನೆಪದಲ್ಲಿ ಹಳೆ ವಿದ್ಯಾರ್ಥಿಯಿಂದ ಹೈಸ್ಕೂಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಬ್ಲಾಕ್‌ಮೇಲ್‌ ಮಾಡುತ್ತಿದ್ದ...

ಸ್ಪೋರ್ಟ್ಸ್‌ ಹೇಳಿಕೊಡುವ ನೆಪದಲ್ಲಿ ಹಳೆ ವಿದ್ಯಾರ್ಥಿಯಿಂದ ಹೈಸ್ಕೂಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಬ್ಲಾಕ್‌ಮೇಲ್‌ ಮಾಡುತ್ತಿದ್ದ ಕಿರಾತಕ!

ಮಂಡ್ಯ: ಸ್ಪೋರ್ಟ್ಸ್‌ ಹೇಳಿಕೊಡುವ ನೆಪದಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಪ್ರೌಢ ಶಾಲೆಯೊಂದರ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಪ್ರೌಢ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.
ಹಳೆ ವಿದ್ಯಾರ್ಥಿ ಯೋಗಿ ಎನ್ನುವಾತ ಪ್ರೌಢ ಶಾಲೆಯಲ್ಲಿ ಸ್ಪೋರ್ಟ್ಸ್‌, ಡ್ರಾಯಿಂಗ್‌ ಹೇಳಿಕೊಡುವ ನೆಪದಲ್ಲಿ ಈ ಕೃತ್ಯ ಎಸಗಿದ್ದಾನೆ. ಮೊದಲು ಅಣ್ಣನಂತೆ ಎಂದು ನಂಬಿಸಿ, ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ಅವರ ನಗ್ನ ಫೋಟೊಗಳನ್ನು ತೆಗೆದು ಬಳಿಕ ನಿಮ್ಮ ತಂದೆ, ತಾಯಿಗೆ ಫೋಟೊ ತೋರಿಸುವುದಾಗಿ ಹೇಳಿ ಬ್ಲಾಕ್‌ಮೇಲ್‌ ಮಾಡುತ್ತಿದ್ದನು ಎನ್ನಲಾಗಿದೆ. ಹೀಗೆ ಬ್ಲಾಕ್‌ಮೇಲ್‌ ಮಾಡಿ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕ್ರೀಡೆಯಲ್ಲಿ ಆಸಕ್ತಿ ಇರುವ ಬಾಲಕಿಯರನ್ನೇ ಈತ ಟಾರ್ಗೆಟ್‌ ಮಾಡುತ್ತಿದ್ದ ಎನ್ನಲಾಗಿದೆ.


ಈತನ ದುಷ್ಕೃತ್ಯದಿಂದ ಬೇಸತ್ತ ನಾಲ್ವರು ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯರ ಪತ್ರ ನೋಡಿ ಶಾಲೆಗೆ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಪೋಕ್ಸೊ ಸಹಿತ ವಿವಿಧ ಕಾನೂನಿನಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

RELATED ARTICLES
- Advertisment -
Google search engine

Most Popular