Tuesday, January 14, 2025
Homeಮಂಗಳೂರುಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರ : ರಜತ ಮಹೋತ್ಸವ ಹಾಗೂ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕದ...

ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರ : ರಜತ ಮಹೋತ್ಸವ ಹಾಗೂ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ, ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಹಾಗೂ ಏಕಹಾ ಭಜನಾ ಮಹೋತ್ಸವವು ಇದೇ ಬರುವ ಮಾರ್ಚ್ 1 ರಿಂದ 4, 2025 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ಇತ್ತೀಚಿಗೆ ಭಜನಾ ಮಂದಿರದ ಆವರಣದಲ್ಲಿ ನಡೆಯಿತು.

ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಶ್ರೀ ಡಿ. ವೇದವ್ಯಾಸ್ ಕಾಮತ್ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಇನ್ನಿತರ ಗೌರವಾಧ್ಯಕ್ಷರುಗಳಾದ ಶ್ರೀ ಎಚ್.ಕೆ.ಪುರುಷೋತಮ್, ಶ್ರೀ ಕುಶಾಲ್ ಕುಮಾರ್, ಶ್ರೀ ಸುಂದರ್ ಅಂಚನ್, ಅಧ್ಯಕ್ಷರಾದ ಶ್ರೀ ಅವಿನಾಶ್ ಅಂಚನ್, ಉಪಾಧ್ಯಕ್ಷರುಗಳಾದ ಶ್ರೀಮತಿ ವನಿತಾ ಪ್ರಸಾದ್, ಶ್ರೀ ಕಿಶೋರ್ ಕೊಟ್ಟಾರಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular