ಬಂಟ್ವಾಳ: ಇಲ್ಲಿನ ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಂಭೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬುಧವಾರ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವೆಂಬರ್ ತಿಂಗಳು ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಮಕ್ಕಳ ಕಲಾ ಲೋಕ ಅಧ್ಯಕ್ಷ ರಮೇಶ ಎಂ. ಬಾಯಾರು ಮಾಹಿತಿ ನೀಡಿದರು. ಶಿಕ್ಷಕರು ಮತ್ತು ಮಕ್ಕಳ ಜೊತೆಗೆ ಸ್ಥಳೀಯ ಗಣ್ಯರು ಮತ್ತು ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಮಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಶಾಂತಿಲ. ಮಾಧ್ಯಮ ಪ್ರಮುಖ್ ಚಿನ್ನಾ ಕಲ್ಲಡ್ಕ ಮಾತನಾಡಿದರು.
ಪ್ರಮುಖರಾದ ಹೆನ್ರಿ ಬುಕೆಲ್ಲೋ, ದಯಾನಂದ ಅಡೆಪ್ಪಿಲ, ಶಿವರಾಮ ಮಡಿಮುಗೇರು, ಮೋನಪ್ಪ ಮುಗೇರ ಪಡ್ಪು, ಹರೀಶ ಕೆಲೆಂಜಿಗುರಿ, ರಮೇಶ ಬರ್ಕೆ, ಜಗನ್ನಾಥ ಸಣ್ಣ ಕುಕ್ಕು, ನಾಗರಾಜ ಪೂಜಾರಿ ಅಡೆಪ್ಪಿಲ ಮತ್ತಿತರರು ಇದ್ದರು.
ಮುಖ್ಯಶಿಕ್ಷಕ ಜಯರಾಮ ಡಿ. ಪಡ್ರೆ ಸ್ವಾಗತಿಸಿ, ವಂದಿಸಿದರು.
ಶಂಭೂರು: 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
RELATED ARTICLES