Saturday, February 15, 2025
Homeಸಾಹಿತ್ಯಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ದತ್ತಿ ಉಪನ್ಯಾಸ

ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ದತ್ತಿ ಉಪನ್ಯಾಸ

ಜಗತ್ತಿನ ಶ್ರೇಷ್ಠ ಸಂಸ್ಕೃತಿ ಕಾಯಕ ಮತ್ತು ದಾಸೋಹ ಸಂಸ್ಕೃತಿ : ಡಾ.ಜೆ.ಕೆ.ಮಲ್ಲಿಕಾರ್ಜುನಪ್ಪ


ದಾವಣಗೆರೆ :- ಜಗತ್ತಿನ ಶ್ರೇಷ್ಠ ಸಂಸ್ಕೃತಿ 12ನೇ ಶತಮಾನದ ಬಸವಾಧಿ ಶರಣರು ಕಟ್ಟಿದ ಕಾಯಕ
ಪ್ರಸಾದ ದಾಸೋಹ ಸಂಸ್ಕೃತಿ ಎಂದು ಎ.ಆರ್.ಜಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶರಣ ಡಾ.ಜೆ.ಕೆ.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ನಗರದ ಡಿ ಆರ್ ಎಂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ಜೀವನ ದೃಷ್ಟಿ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಕಾಯಕ ತತ್ವದಿಂದ ಕಾಯ ವಾಚ ಆರೋಗ್ಯವಾಗಿರುತ್ತದೆ. ಪ್ರಸಾದ ತತ್ವದಿಂದ ಮನುಷ್ಯ ತೃಪ್ತಿಯಾಗಿರುತ್ತಾನೆ ಮತ್ತು ದಾಸೋಹ ಭಾವದಿಂದ ಸಮಾಜದಲ್ಲಿ ಸ್ವಾರ್ಥ ಕಡಿಮೆಯಾಗಿ ಸಮಾಜದ ಆರೋಗ್ಯ ಸುಧಾರಿಸುತ್ತದೆ. ಈ ಮೌಲ್ಯಗಳನ್ನು 21ನೇ ಶತಮಾನದ ನಾವುಗಳು ಅಳವಡಿಸಿಕೊಂಡಲ್ಲಿ ಈ ಶತಮಾನದ ಪಿಡುಗುಗಳಾದ ಬಡತನ ಭ್ರಷ್ಟಾಚಾರ ಮಹಿಳಾ ದೌರ್ಜನ್ಯ ಮುಂತಾದವುಗಳಿಗೆ ಮುಕ್ತಿ ಕಾಣಿಸಬಹುದು ಎಂದು ತಿಳಿಸಿದರು. ದತ್ತಿ ದಾನಿಗಳಾದ ಬಸವ ಬಳಗದ ಶರಣ ವಿಭೂತಿ ಬಸವಾನಂದರು ಮಕ್ಕಳಿಗೆ ಹಿತವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನಾ ನುಡಿಗಳನ್ನು ಶರಣಿ ಗಾಯತ್ರಿ ವಸ್ತ್ರದ್, ಅಧ್ಯಕ್ಷಿಯ ನುಡಿಗಳನ್ನು,ಕಾಲೇಜಿನ ಪ್ರಾಂಶುಪಾಲರಾದ ಶರಣ ಜೆ.ಶಿವಪ್ಪ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಶರಣ ಕೆ ಬಿ ಪರಮೇಶ್ವರಪ್ಪ ಆವರು ನುಡಿದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ಬಿ ಟಿ ಪ್ರಕಾಶ್ ಹಾಡಿದರು . ಡಾ.ಪಿ ಜಿ ರುದ್ರೇಶ್ ಸ್ವಾಗತ ಕೋರಿದರು, ಆರ್ ಸಿದ್ದೇಶಪ್ಪ ಶರಣು ಸಮರ್ಪಣೆ ಸಲ್ಲಿಸಿದರು ಮತ್ತು ಭರ್ಮಪ್ಪ ಮೈಸೂರ್ ಕಾರ್ಯಕ್ರಮವನ್ನು
ನಿರೂಪಿಸಿದರು.

RELATED ARTICLES
- Advertisment -
Google search engine

Most Popular