ಬೈಲೂರು : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ತಾ. 09.12.2024 ಸೋಮವಾರದಿಂದ ಮೊದಲ್ಗೊಂಡು 15.12.2024 ರವರೆಗೆ ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವೆಯು ನಡೆಯಲಿದೆ.
ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ ದೇವಸ್ಥಾನದ ಶಿಲಾಶಿಲಾ ತಂತ್ರಿಗಳಾದ ಶ್ರೀ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ, ಶ್ರೀ ಕೆ. ಎ. ಶ್ರೀರಮಣ ತಂತ್ರಿ ಕೊರಂಗ್ರಪಾಡಿ ಇವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರಾದ ಕೆ. ವಾಸುದೇವ ಭಟ್ ಇವರ ಸಹಕಾರದೊಂದಿಗೆ ನೆರವೇರಲಿರುವುದು.
ದಿನಾಂಕ 09-12-2024ನೇ ಸೋಮವಾರ ಸಂಜೆ 4.00 ಘಂಟೆಗೆ ಸರಿಯಾಗಿ ಜೋಡುಕಟ್ಟೆಯಿಂದ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದವರೆಗೆ ಹಸಿರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆಯು ಹೊರಡಲಿದೆ. * ಹೊರೆಕಾಣಿಕೆ ರೂಪದಲ್ಲಿ ಅಕ್ಕಿ, ತರಕಾರಿ, ಬೆಲ್ಲ, ಸಕ್ಕರೆ, ಬೇಳೆಕಾಳು, ತೆಂಗಿನಕಾಯಿ, ಎಣ್ಣೆ, ತುಪ್ಪ, ಎಳನೀರು, ಬಾಳೆಗೊನೆ, ಹಿಂಗಾರವನ್ನು ನೀಡಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ವಿ.ಸೂ. : ಭಕ್ತರು ಸಮರ್ಪಿಸುವ ಹೊರೆಕಾಣಿಯನ್ನು ಪ್ರತಿದಿನವೂ ಸ್ವೀಕರಿಸಲಾಗುವುದು