Tuesday, December 3, 2024
Homeಬಂಟ್ವಾಳಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಇದರ ಮಾಸಿಕ ಸಭೆ ಹಾಗೂ ಶ್ರಮದಾನ

ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಇದರ ಮಾಸಿಕ ಸಭೆ ಹಾಗೂ ಶ್ರಮದಾನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಇದರ ಮಾಸಿಕ ಸಭೆ ಹಾಗೂ ಶ್ರಮದಾನ ದಿನಾಂಕ 27-10-2024 ರಂದು ಸರಕಾರಿ ಪ್ರಾಥಮಿಕ ಶಾಲೆ ಬೋಳಂತೂರಿನಲ್ಲಿ ಜರಗಿತು.

ಮಾಸಿಕ ಸಭೆಯಲ್ಲಿ ಘಟಕದ ಮುಂದಿನ ಸೇವಾ ಕಾರ್ಯ ಗಳ ಬಗ್ಗೆ ಚರ್ಚಿಸಲಾಯಿತು.
ತದನಂತರ ಘಟಕದ ಸದಸ್ಯರು ಬೋಳಂತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಳಂತೂರು ಇಲ್ಲಿನ ಶಾಲಾ ಮುಖ್ಯ ಶಿಕ್ಷಕಿಯ ಲಿಖಿತ ಮನವಿಗೆ ಸ್ಪಂದಿಸಿ ಶಾಲೆಯ ಆವರಣದ ಒಳಗೆ ಬೆಳೆದ ಬಲ್ಲೆ, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭ ಬೋಳಂತೂರು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಮಹಮ್ಮದ್ ಕುಂಞಿ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್, ಶಿಕ್ಷಕ ಪರಮೇಶ್ವರಯ್ಯ, ಶಿಕ್ಷಕಿ ಸೌಮ್ಯ,ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟ ಅಧ್ಯಕ್ಷರಾದ ಸೀತಾ, ಒಕ್ಕೂಟ ಸೇವಾ ಪ್ರತಿನಿಧಿ ಲೀಲಾವತಿ, ಕಲ್ಲಡ್ಕ ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾ ಸದಸ್ಯರುಗಳಾದ ತುಳಸಿ, ರವಿಚಂದ್ರ, ಮೌರೀಶ್, ವೆಂಕಪ್ಪ, ಸತೀಶ್, ಧನಂಜಯ, ಸಂತೋಷ್ ಬೊಲ್ಪೊಡಿ , ಚಿನ್ನಾ ಕಲ್ಲಡ್ಕ, ಗಣೇಶ್ ನೆಟ್ಲ, ಮೊದಲಾದವರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular