Monday, March 17, 2025
Homeಉಡುಪಿಶಿರ್ವ | ಪತಿ ನಿಧನರಾದ ಐದೇ ಗಂಟೆಯಲ್ಲಿ ಪತ್ನಿಯೂ ನಿಧನ; ಸಾವಿನಲ್ಲೂ ಒಂದಾದ ಎಡೇರುಗುತ್ತು ಸುಂದರ...

ಶಿರ್ವ | ಪತಿ ನಿಧನರಾದ ಐದೇ ಗಂಟೆಯಲ್ಲಿ ಪತ್ನಿಯೂ ನಿಧನ; ಸಾವಿನಲ್ಲೂ ಒಂದಾದ ಎಡೇರುಗುತ್ತು ಸುಂದರ ಶೆಟ್ಟಿ, ವಜನಾ ಶೆಟ್ಟಿ ದಂಪತಿ

ಶಿರ್ವ: ಇಲ್ಲಿಗೆ ಸಮೀಪದ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ (70) ಮತ್ತು ಅವರ ಪತ್ನಿ ಎಡೇರುಗುತ್ತು ವನಜಾ ಶೆಟ್ಟಿ (62) ನಿಧನರಾಗಿದ್ದಾರೆ. ಸೋಮವಾರ ಒಂದೇ ದಿನ 5 ಗಂಟೆಗಳ ಅಂತರದಲ್ಲಿ ದಂಪತಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಪತಿ-ಪತ್ನಿ ಸಾವಿನಲ್ಲೂ ಒಂದಾದರು.

ವಯೋಸಹಜ ಅನಾರೋಗ್ಯದಿಂದ ಸುಂದರ ಶೆಟ್ಟಿ ಸೋಮವಾರ ಬೆಳಿಗ್ಗೆ 9ಗಂಟೆಗೆ ಎಡೇರುಗುತ್ತುವಿನಲ್ಲಿ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಶಂಕರಪುರದ ಅವರ ಮೂಲ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಅವರ ಪತ್ನಿ ವನಜಾ ಶೆಟ್ಟಿಯೂ ನಿಧನ ಹೊಂದಿದರು. ಸುಂದರ ಶೆಟ್ಟಿರವರು ಪಾಕತಜ್ಞರಾಗಿದ್ದು, ಅಡುಗೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು. ದಂಪತಿ ಮಕ್ಕಳಿಲ್ಲದೆ ಇದ್ದು, ಕುಟುಂಬಸ್ಥರನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular