Saturday, November 2, 2024
Homeಧಾರ್ಮಿಕ" ಶಾಂತ ಶ್ರೀ" ಪ್ರಶಸ್ತಿಗೆ ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ ಇದರ ರೂವಾರಿ ಕೆ ರಮೇಶ್...

” ಶಾಂತ ಶ್ರೀ” ಪ್ರಶಸ್ತಿಗೆ ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ ಇದರ ರೂವಾರಿ ಕೆ ರಮೇಶ್ ಕಲ್ಲಡ್ಕ ಆಯ್ಕೆ

ಕಲ್ಲಡ್ಕ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿಜಿಸ್ಟರ್ ಕಲ್ಲಡ್ಕ ಇದರ ಆಶ್ರಯದಲ್ಲಿ ನಡೆಯುತ್ತಿರುವಂತಹ 47 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವದ ಸಂದರ್ಭದಲ್ಲಿ ದಿವಂಗತ ಶಾಂತರಾಮ ಆಚಾರ್ಯ ಕಲ್ಲಡ್ಕ ಇವರ ಸವಿ ನೆನಪಿಗಾಗಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವರ್ಷಂ ಪ್ರತಿ ನೀಡುವ “ಶಾಂತ ಶ್ರೀ ” ಪ್ರಶಸ್ತಿಗೆ ಜಾನಪದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅದ್ಭುತ ಕಲಾವಿದರಾದ ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ ಇದರ ರೂವಾರಿಗಳಾದ ಕೆ ರಮೇಶ್ ಕಲ್ಲಡ್ಕ ಇವರನ್ನು ಆಯ್ಕೆ ಮಾಡಲಾಗಿದೆ.
ದಿನಾಂಕ 11-10-2024 ನೇ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಶಾರದಾ ಪೂಜಾಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular