ಮಂಗಳೂರು: ಖ್ಯಾತ ಬಾಲಿವುಡ್ ನಟಿ, `ತುಳುನಾಡ ಪೊಣ್ಣು’ ಶಿಲ್ಪಾ ಶೆಟ್ಟಿ ದೈವ ಕೋಲದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಾವು ತಮ್ಮ ಊರಿನಲ್ಲಿ ದೈವ ಕೋಲ ಹಾಗೂ ನಾಗಮಂಡಲದಲ್ಲಿ ಭಾಗವಹಿಸಿದ ಬಗ್ಗೆ ಹಂಚಿಕೊಂಡಿದ್ದಾರೆ.
ತುಳುನಾಡಿನ ಹೆಣ್ಣು. ನನ್ನ ಮೂಲ ಊರಿಗೆ ಬಂದಿದ್ದೇನೆ. ನನ್ನ ಮಕ್ಕಳಿಗೆ ನನ್ನ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೇನೆ. ಮಂಗಳೂರಿನಲ್ಲಿ ನಾಗಮಂಡಲ ಮತ್ತು ಕೊಡಮಣಿತ್ತಾಯ ದೈವ ಕೋಲವನ್ನು ವೀಕ್ಷಿಸಿದ್ದೇನೆ. ಇದನ್ನು ಮಕ್ಕಳು ನೋಡಿ ಅಚ್ಚರಿಪಟ್ಟರು. ಭಕ್ತಿಯಿಂದ ಅನುಸರಿಸುವ ಶಕ್ತಿ ಮತ್ತು ನಂಬಿಕೆಯನ್ನು ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ ಎಂದು ಶಿಲ್ಪಾ ಶೆಟ್ಟಿ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ವೀಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ತಾಯಿ ಸುನಂದಾ ಮತ್ತು ಮಕ್ಕಳ ಜೊತೆಗೆ ದೈವ ಕೋಲ ವೀಕ್ಷಿಸಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆದಿದ್ದಾರೆ.
https://www.instagram.com/reel/C6TrPE6IZjC/?utm_source=ig_embed&ig_rid=4f31a632-ea46-4761-ba6c-4fe12478cc05