Sunday, July 21, 2024
Homeಅಪಘಾತಶಿವಮೊಗ್ಗ : ಆಂಬುಲೆನ್ಸ್ ಗೆ ಬೈಕ್‌ ಡಿಕ್ಕಿ ಹೊಡೆದು ಮೂವರು ಬೈಕ್‌ ಸವಾರರು ಸಾವನ್ನಪ್ಪಿದ ಘಟನೆ

ಶಿವಮೊಗ್ಗ : ಆಂಬುಲೆನ್ಸ್ ಗೆ ಬೈಕ್‌ ಡಿಕ್ಕಿ ಹೊಡೆದು ಮೂವರು ಬೈಕ್‌ ಸವಾರರು ಸಾವನ್ನಪ್ಪಿದ ಘಟನೆ

ಆಂಬುಲೆನ್ಸ್ ಗೆ ಬೈಕ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ತಡರಾತ್ರಿ ನಡೆದಿದೆ.
ಮೃತರನ್ನು ಪ್ರಸನ್ನ (25) ಕಾರ್ತಿಕ್ (27) ಅಜಯ್ (25) ಎಂದು ಗುರುತಿಸಲಾಗಿದೆ. ಮೃತರು ಜೋಗ ಮೂಲದವರು ಎಂದು ತಿಳಿದು ಬಂದಿದೆ.
ಶಿವಮೊಗ್ಗದಿಂದ ಹಾವೇರಿ ಕಡೆಗೆ ಆಂಬುಲೆನ್ಸ್ ತೆರಳುತ್ತಿತ್ತು, ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular