ಮಸ್ಕತ್: ಒಮಾನ್ ಕರಾವಳಿಯ ಸಮುದ್ರದಲ್ಲಿ ತೈಲ ಹಡಗೊಂದು ಮುಳುಗಿದ್ದು, ಹಡಗಿನಲ್ಲಿದ್ದ 13 ಮಂದಿ ಭಾರತೀಯ ಸಿಬ್ಬಂದಿ ಸಹಿತ 16 ಮಂದಿ ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ನ ಏಡೆನ್‌ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು.
ಒಮನ್‌ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು, 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿಯ ರಕ್ಷಣಾ ಕಾರ್ಯ ನಡೆಯುತ್ತಿದೆ.
ತೈಲ ಹಡಗು ಮುಳುಗಡೆ : 13 ಮಂದಿ ಭಾರತೀಯ ಸಿಬ್ಬಂದಿ ನಾಪತ್ತೆ
RELATED ARTICLES