ಶಿರಸಿ ನಗರದ ಸ್ಮಾರ್ಟ್ ಡಾನ್ಸ್ ಅಕಾಡೆಮಿಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 1 ರಂದು ನ್ರತ್ಯೋತ್ಸವ -2025 ನಗರದ ವಿಕಾಸ ಆಶ್ರಮ ಮೈದಾನದ ಬಯಲು ರಂಗ ಮಂದಿರದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆ ಶಾಸಕ ಭೀಮಣ್ಣ ನಾಯ್ಕ್ ನಡೆಸಿ ಕೊಡಲಿದ್ದು, ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರ ಠಾಣೆ ಪಿಎಸ್ಐ ನಾಗಪ್ಪ. ಬಿ. ಕಾಂಗ್ರೆಸ್ ಮುಖಂಡ ಸಂತೋಷ ಶೆಟ್ಟಿ, ಮಾರ್ಕೆಟ್ ಠಾಣೆ ಪಿಎಸ್ಐ ರತ್ನಾ ಕುರಿ, ರಾಜ್ ನ್ಯೂಸ್ ನ ಸಂತೋಷ ಕುಮಾರ್ ಜೆ. ಆರ್, ಶ್ರೀ ಕೃಷ್ಣ ಪ್ರಿಂಟರ್ ಮಾಲೀಕರಾದ ಶ್ಯಾಮಸುಂದರ ಮುಳೆ ಸೇರಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.