ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತಿ ಹಾಗೂ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಮರ್ಣೆ ಗ್ರಾಮ ಪಂಚಾಯತಿ ಗಡಿ ಭಾಗವಾದ ಚಿಂಕರಮಲೆಯ ಉಯ್ಯಾಲೆಪಾದೆ ಎಂಬಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡ್ಗಿಚ್ಚು ಹಬ್ಬಿದೆ. ಇದರಿಂದಾಗಿ ಸುಮಾರು ಮೂರು ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಸಂಪತ್ತು ಕಾಡ್ಗಿಚ್ಚಿಗೆ ನಾಶವಾಗಿದೆ. ಚಿಂಕರಮಲೆ ಸುತ್ತಮುತ್ತ ಈಗಾಗಲೇ ಬೆಂಕಿ ವ್ಯಾಪಕವಾಗಿ ಹರಡಿದೆ. ಉಯ್ಯಾಲೆಪಾದೆ ಮುಖ್ಯರಸ್ತೆಯಿಂದ ಸುಮಾರು ಎರಡು ಕಿ. ಮೀ ದೂರದಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಸುಮಾರು ಐವತ್ತು ಜನರ ತಂಡ ನಂದಿಸಿದೆ. ಕಾಡ್ಗಿಚ್ಚು ಇನ್ನೂ ಹಬ್ಬದಂತೆ ಕಟ್ಟೆಚ್ಚರ ವಹಿಸಲಾಗಿದೆ. ಉಯ್ಯಾಲೆಪಾದೆ ಪರಿಸರದಲ್ಲಿ ಜೇನು ತೆಗೆಯಲು ಹೋದವರು ಜೇನು ಹುಳು ಓಡಿಸಲು ಹೊಗೆ ಹಾಕಿದ್ದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯಿಲ್ಲ.